ಜಿಂಬಾಬ್ವೆ ಸರಣಿಯನ್ನು ಸವಾಲಾಗಿ ಸ್ವೀಕರಿಸಿರುವ ಧೋನಿ

ಬುಧವಾರ, 8 ಜೂನ್ 2016 (12:17 IST)
ಮಹೇಂದ್ರ ಸಿಂಗ್ ಧೋನಿ ಜಿಂಬಾಬ್ವೆ ವಿರುದ್ಧ ಮುಂಬರುವ ಸರಣಿಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಐಪಿಎಲ್‌ನಲ್ಲಿ ತಮ್ಮ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು 7ನೇ ಸ್ಥಾನದಲ್ಲಿರಿಸಿರುವ ಮೂಲಕ ನೀರಸ ಪ್ರದರ್ಶನ ನೀಡಿದ್ದ ಧೋನಿ, ಸೀಮಿತ ಓವರುಗಳ ಕ್ರಿಕೆಟ್‌ನಲ್ಲಿ ತಾವಿನ್ನೂ ಶ್ರೇಷ್ಟ ನಾಯಕ ಎಂಬ ನಂಬಿಕೆ ಬಲಪಡಿಸಲು ಜಿಂಬಾಬ್ವೆ ತಂಡವನ್ನು ಎದುರಿಸುತ್ತಿದ್ದಾರೆ.
 
 ಜಿಂಬಾಬ್ವೆ ವಿರುದ್ಧ ಅನುಭವ ಭಿನ್ನವಾಗಿರುತ್ತದೆ. ಕೆಲವು ಆಟಗಾರರ ಜತೆ ತಾವು ಮೊದಲ ಬಾರಿಗೆ ಆಡುತ್ತಿದ್ದೇನೆ. ತಂಡದ ಸಂಯೋಜನೆ ಉತ್ತಮವಾಗಿ ಕಾಣುತ್ತಿದೆ ಎಂದು ಹೊಸ ಕೇಶಶೈಲಿ ಪ್ರದರ್ಶಿಸುತ್ತಾ ಧೋನಿ ಹೇಳಿದರು. 
 
 2016ರ ಉತ್ತರಾರ್ಧದಲ್ಲಿ ಮತ್ತು 2017ರ ಮೊದಲಾರ್ಧದಲ್ಲಿ ಸೀಮಿತ ಓವರುಗಳ ಕ್ರಿಕೆಟ್ ಆಡುವ ನಿರೀಕ್ಷೆಯನ್ನು ಭಾರತ ಹೊಂದಿಲ್ಲ. ಎಲ್ಲಾ ಮಾದರಿಗಳ ಆಟಗಳಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಕಡೆ ಅಲೆ ಬೀಸುತ್ತಿರುವ ಸಂದರ್ಭದಲ್ಲಿ ಧೋನಿಗೆ ಜಿಂಬಾಬ್ವೆ ಸರಣಿ ಮೂಲಕ ತಮ್ಮ ನಾಯಕತ್ವ ವಿಶ್ವಾಸಾರ್ಹತೆ ಸಾಬೀತು ಮಾಡಲು ಸೀಮಿತ ಅವಕಾಶ ಸಿಕ್ಕಿದೆ.
 
 ಭಾರತ 2016-17ರಲ್ಲಿ 12ಕ್ಕೂ ಹೆಚ್ಚು ಪಂದ್ಯಗಳನ್ನು ಆಡಲಿದೆ. ಐದು ದಿನಗಳ ಮಾದರಿ ಆಟದಿಂದ ನಿವೃತ್ತರಾದ ಧೋನಿ ಸುದೀರ್ಘಕಾಲದವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿಯಲಿದ್ದಾರೆ. ತಾವು ದೇಶಕ್ಕಾಗಿ ಆಡುತ್ತಿರುವುದು ದೊಡ್ಡ ಪ್ರೇರಕ ಶಕ್ತಿಯಾಗಿದೆ. ಫಿಟ್ನೆಸ್ ನನಗೆ ವಿಷಯವಾಗಿಲ್ಲ. ನಾನು ಮಾಡುವ ಕೆಲಸದಲ್ಲಿ ಫಿಟ್ ಆಗಿದ್ದೇನೆ ಎಂದು ಧೋನಿ ಮುಂಬೈನಲ್ಲಿ ಧೋನಿ ವರದಿಗಾರರಿಗೆ ತಿಳಿಸಿದರು.  ಮೊದಲ ಏಕದಿನ ಪಂದ್ಯವನ್ನು ಜೂನ್ 11 ರಂದು ಹರಾರೆಯಲ್ಲಿ ಆಡಲಾಗುತ್ತದೆ.
 
ಯುಕೆಯಲ್ಲಿ ನಡೆಯುವ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೇಲೆ ಧೋನಿ ಕಣ್ಣಿರಿಸಿದ್ದು, ಭಾರತ ಹಾಲಿ ಚಾಂಪಿಯನ್ನರಾಗಿದ್ದು, ಇನ್ನೊಂದು ವಿಶ್ವಕ್ರಿಕೆಟ್ ಕೂಟದಲ್ಲಿ ಭಾರತವನ್ನು ಮುನ್ನಡೆಸಲು ಧೋನಿ ಆಸಕ್ತರಾಗಿದ್ದಾರೆ.
 ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಮತ್ತು 1998ರ ವಿಜೇತ ತಂಡ ದಕ್ಷಿಣ ಆಫ್ರಿಕಾ ಜತೆಯಲ್ಲಿದೆ. ಭಾರತ ಜೂನ್ 4ರಂದು ಎಜ್‌ಬಾಸ್ಟನ್‌ನಲ್ಲಿ ಪಾಕಿಸ್ತಾನದ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ