ಧೋನಿ ಟೆಸ್ಟ್ ಕ್ರಿಕೆಟ್ ಅನ್ನು ಡಿಸೆಂಬರ್ 2014ರಂದು ತ್ಯಜಿಸಿದರು. ಆದರೆ ಆಟದ ಸುದೀರ್ಘ ಮಾದರಿಯನ್ನು ಅವರು ಮಿಸ್ ಮಾಡಿಕೊಂಡಿದ್ದಾರೆ. ಕ್ರಿಕೆಟ್ ಕೀಟವು ನಮ್ಮನ್ನು ತೊರೆಯುವುದೇ ಇಲ್ಲ. ನಾವು ಆಟವನ್ನು ತ್ಯಜಿಸಿದರೂ ಅದರ ಜತೆ ಸಂಪರ್ಕ ಹೊಂದಿರಲು ಯತ್ನಿಸುತ್ತೇವೆ. ಟೆಸ್ಟ್ ಕ್ರಿಕೆಟ್ ಮಿಸ್ ಮಾಡಿಕೊಂಡರೂ ಕೂಡ ಅದು ಸವಾಲಿನದ್ದಾಗಿದ್ದರಿಂದ ನಾನು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆಂದು ಭಾವಿಸಿದ್ದೇನೆ ಎಂದು ಧೋನಿ ಗುರಗಾಂವ್‌ನ ಸಮಾರಂಭದಲ್ಲಿ ತಿಳಿಸಿದರು.