ಲಂಡನ್: ಭಾರತದ ಮಹಿಳಾ ಕ್ರಿಕೆಟ್ ತಂಡ ಸದ್ಯಕ್ಕೆ ಲಂಡನ್ ನಲ್ಲಿ ವಿಶ್ವಕಪ್ ಪಂದ್ಯವಾಡುತ್ತಿದೆ. ಮೊದಲ ಪಂದ್ಯದಲ್ಲೇ ಗೆದ್ದು ಬೀಗುತ್ತಿದೆ. ಇದೆಲ್ಲದರ ಹಿಂದೆ ನಾಯಕಿ ಮಿಥಾಲಿ ರಾಜ್ ಸ್ಪೂರ್ತಿಯಿದೆ.
ಭಾರತ ಕ್ರಿಕೆಟ್ ನ ಕೂಲ್ ಕ್ಯಾಪ್ಟನ್ ಯಾರೆಂದರೆ ಎಲ್ಲರೂ ಥಟ್ಟನೆ ಧೋನಿ ಹೆಸರು ಹೇಳುತ್ತಾರೆ. ಎಂತಹದ್ದೇ ಒತ್ತಡ ಬಂದರೂ ತಾಳ್ಮೆ ಕಳೆದುಕೊಳ್ಳದ ನಾಯಕ ಎಂದು ಎಲ್ಲರೂ ಅವರನ್ನು ಹೊಗಳುತ್ತಾರೆ. ಆದರೆ ಧೋನಿಯನ್ನೂ ಮೀರಿಸಿದ ಕೂಲ್ ಕ್ಯಾಪ್ಟನ್ ನಮ್ಮಲ್ಲಿದ್ದಾರೆ.
ಅವರೇ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್. ನಾಯಕತ್ವದ ವಿಚಾರದಲ್ಲಿ ತಮ್ಮ ತಂಡವನ್ನು ಸಮರ್ಥಿಸಿಕೊಳ್ಳುವುದರಲ್ಲಿ ಅವರು ಧೋನಿಯನ್ನೇ ಹೋಲುತ್ತಾರೆ. ಆದರೆ ತಾಳ್ಮೆ ವಿಚಾರದಲ್ಲಿ ಧೋನಿಯನ್ನೂ ಮೀರಿಸುತ್ತಾರೆ.
ಯಾಕೆಂದರೆ ಪ್ರಮುಖ ಬ್ಯಾಟ್ಸ್ ಮನ್ ಕೂಡಾ ಆಗಿರುವ ಮಿಥಾಲಿ ತಮ್ಮ ಬ್ಯಾಟಿಂಗ್ ಸರದಿ ಬರುವವರೆಗೂ ಉಗುರು ಕಚ್ಚುತ್ತಾ ಟೆನ್ ಷನ್ ಮಾಡಿಕೊಂಡು ಕೂರುವುದಿಲ್ಲ. ತಣ್ಣಗೆ ಪುಸ್ತಕ ಓದುತ್ತಾ ಕುಳಿತಿರುತ್ತಾರೆ. ತಮ್ಮ ಪಾಳಿ ಬಂದಾಗ ಪುಸ್ತಕ ಮಡಚಿಟ್ಟು ಬ್ಯಾಟ್ ಕೈಗೆತ್ತಿಕೊಂಡು ಫೀಲ್ಡಿಗೆ ಇಳಿಯುತ್ತಾರೆ. ಇದು ಅವರು ಏಕಾಗ್ರತೆ ಕಂಡುಕೊಳ್ಳಲು ಮಾಡುವ ತಂತ್ರವಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ