ವಿಶ್ವಕಪ್ ಸೋಲಿನ ನಂತರ ನಿವೃತ್ತಿಯಾಗ್ತಾರಾ ಮಿಥಾಲಿ ರಾಜ್?

ಸೋಮವಾರ, 24 ಜುಲೈ 2017 (10:51 IST)
ಲಂಡನ್: ವಿಶ್ವಕಪ್ ಫೈನಲ್ ನಲ್ಲಿ ಗೆಲುವಿನಂಚಿಗೆ ಬಂದು ಸೋತ ಮಹಿಳಾ ಟೀಂ ಇಂಡಿಯಾ ನಾಯಕಿ ಮಿಥಾಲಿ ರಾಜ್ ನಿವೃತ್ತಿ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಅವರೇನು ಹೇಳ್ತಾರೆ ನೋಡಿ.


35 ರ ಹರೆಯದ ಮಿಥಾಲಿ 16 ವರ್ಷದವರಾಗಿದ್ದಾಗ ಕ್ರಿಕೆಟ್ ಆಡಲು ಮೈದಾನಕ್ಕಿಳಿದವರು. ಇದೀಗ ಮೊದಲ ಬಾರಿಗೆ ತಂಡವನ್ನು ವಿಶ್ವಕಪ್ ನಲ್ಲಿ ಮುನ್ನಡೆಸಿದ್ದಲ್ಲೆ, ಫೈನಲ್ ವರೆಗೆ ತಲುಪಿ ಭಾರತ ಮಹಿಳಾ ಕ್ರಿಕೆಟ್ ಬಗ್ಗೆ ಎಲ್ಲರಿಗೂ ಆಸಕ್ತಿ ಬರುವಂತೆ ಆಟವಾಡಿದವರು. ಅವರು ಇನ್ನು ನಿವೃತ್ತಿಯ ಬಗ್ಗೆ ಯೋಚಿಸಬಹುದು ಎಂದೇ ಎಲ್ಲರೂ ಲೆಕ್ಕಾಚಾರ ಹಾಕುತ್ತಿದ್ದಾರೆ.

ಆದರೆ ಮಿಥಾಲಿ ಮುಂದಿನ ಎರಡು ವರ್ಷ ನಿವೃತ್ತಿಯ ಮಾತೇ ಇಲ್ಲ ಎಂದು ಅಭಿಮಾನಿಗಳಿಗೆ ಸಂತಸ ತಂದಿದ್ದಾರೆ. ಆದರೆ ಮುಂದಿನ ವಿಶ್ವಕಪ್ ಆಡುವುದು ಅನುಮಾನ ಎಂದಿದ್ದಾರೆ. ಇದೇ ವೇಳೆ ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಯುವ ಆಟಗಾರ್ತಿಯರ ಬಗ್ಗೆ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಕೊನೆಯ ಹಂತದಲ್ಲಿ ನಮ್ಮ ಹುಡುಗಿಯರು ಧೈರ್ಯ ಕಳೆದುಕೊಂಡರು. ಇದೇ ಕಾರಣಕ್ಕೆ ಸೋತೆವು. ಆದರೂ ಪೈಪೋಟಿ ನೀಡಿ ಸೋತ ತಂಡದ ಬಗ್ಗೆ ಅವರು ಹೆಮ್ಮೆ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ..  ನಿವೃತ್ತಿ ನಂತರ ಪ್ರಣಬ್ ಮುಖರ್ಜಿ ಜೀವನ ಹೇಗಿದೆ ಗೊತ್ತಾ?!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ