ಇಂಗ್ಲೆಂಡ್‌ನಲ್ಲಿ ಸರಿಯಾದ ನಡವಳಿಕೆ ತೋರುವಂತೆ ವೇಗಿ ಅಮೀರ್‌ಗೆ ಪಿಸಿಬಿ ಎಚ್ಚರಿಕೆ

ಭಾನುವಾರ, 12 ಜೂನ್ 2016 (18:16 IST)
ಎಡಗೈ ವೇಗಿ ಮೊಹಮ್ಮದ್ ಅಮೀರ್ ಅವರು ಇಂಗ್ಲೆಂಡ್ ಪ್ರವಾಸದಲ್ಲಿ ಉತ್ತಮ ನಡವಳಿಕೆಯಿಂದ ವರ್ತಿಸಿ ತಂಡದ ಆಡಳಿತ ಮಂಡಳಿ ಮತ್ತು ಭ್ರಷ್ಟಾಚಾರ ವಿರೋಧಿ ಸಂಹಿತೆಯ ಪ್ರತಿಯೊಂದು ಸೂಚನೆಯನ್ನು ಪಾಲಿಸಬೇಕು ಎಂದು ಪಿಸಿಬಿ ಆದೇಶಿಸಿದೆ.
 
ಅಮೀರ್ ಅವರು ಪ್ರವಾಸದ ಸಂದರ್ಭದಲ್ಲಿ ಕೆಟ್ಟ ಪರಿಸ್ಥಿತಿಗಳನ್ನು ಎದುರಿಸಲು ಸಿದ್ಧವಾಗಿರಬೇಕು. ಏಕೆಂದರೆ ನೆರೆದ ಗುಂಪನ್ನು ನಿಯಂತ್ರಿಸುವುದು ಯಾರಿಗೂ ಸಾಧ್ಯವಾಗುವುದಿಲ್ಲವಾದ್ದರಿಂದ ಸಹನೆಯಿಂದ ವರ್ತಿಸಬೇಕು ಎಂದು ಅಮೀರ್ ಅವರಿಗೆ ಅಧ್ಯಕ್ಷ ಶಹರ್ ಯಾರ್ ಖಾನ್, ನಜಾಮ್ ಸೇಥಿ ಸ್ಪಷ್ಟವಾಗಿ ತಿಳಿಸಿದ್ದಾರೆಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
 
 ಅಮೀರ್ ಸಲ್ಮಾನ್ ಬಟ್ ಮತ್ತು ಮಹಮ್ಮದ್ ಅಸೀಫ್ ಜತೆ ಪಾಕಿಸ್ತಾನ 2010ರಲ್ಲಿ ಇಂಗ್ಲೆಂಡ್ ಪ್ರವಾಸ ತೆರಳಿದ್ದಾಗ ಸ್ಪಾಟ್ ಫಿಕ್ಸಿಂಗ್ ಆರೋಪ ಎದುರಿಸಿ ಯುಕೆಯಲ್ಲಿ ಜೈಲು ಶಿಕ್ಷೆಗೆ ಕೂಡ ಗುರಿಯಾಗಿದ್ದರು. ಐದು ವರ್ಷಗಳ ನಿಷೇಧದ ಶಿಕ್ಷೆ ಬಳಿಕ ಪುನಃ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಿಂತಿರುಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ