ಟ್ವಿಟರ್ ನಲ್ಲಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಗೆ ತಪರಾಕಿ! ಯಾಕೆ?
ಭಾನುವಾರ, 1 ಜನವರಿ 2017 (07:39 IST)
ನವದೆಹಲಿ: ಕ್ರಿಕೆಟಿಗ ಮೊಹಮ್ಮದ್ ಶಮಿ ನಂತರ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಫೋಟೋಗೆ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿರುವ ಸರದಿ ಮೊಹಮ್ಮದ್ ಕೈಫ್ ರದ್ದು. ಸೂರ್ಯ ನಮಸ್ಕಾರ ಮಾಡುವ ಫೋಟೋ ಪ್ರಕಟಿಸಿ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಕಟ್ಟಾ ಮುಸ್ಲಿಂ ಸಂಪ್ರದಾಯವಾದಿಗಳು ಸೂರ್ಯ ನಮಸ್ಕಾರವನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಮುಸ್ಲಿಂ ಪಂಗಡಕ್ಕೆ ಸೇರಿದ ಕೈಫ್ ಸೂರ್ಯ ನಮಸ್ಕಾರವನ್ನು ಹೊಗಳಿ ಬರೆದುದಲ್ಲದೆ, ಫೋಟೋ ಕೂಡಾ ಪ್ರಕಟಿಸಿರುವುದು ಸಂಪ್ರದಾಯವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸೂರ್ಯ ನಮಸ್ಕಾರ ಇಸ್ಲಾಂ ಧರ್ಮ ಮತ್ತು ಸಂಸ್ಕೃತಿಗೆ ವಿರುದ್ಧವಾದುದು. ಇದನ್ನು ಇಸ್ಲಾಂ ಧರ್ಮದಲ್ಲಿ ನಿಷೇಧಿಸಲಾಗಿದೆ. ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ಟ್ವಿಟರ್ ನಲ್ಲಿ ಏಕೆ ಪ್ರಕಟಿಸುತ್ತೀರಿ ಎಂದು ಕೈಫ್ ಗೆ ಸಂಪ್ರದಾಯವಾದಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕೈಫ್ ನಾನು ಪ್ರಕಟಿಸಿದ ನಾಲ್ಕೂ ಫೋಟೋಗಳಲ್ಲಿ ಸೂರ್ಯ ನಮಸ್ಕಾರ ಮಾಡುವಾಗ ಹೃದಯಲ್ಲಿ ಅಲ್ಲಾಹ್ ನ ಸ್ಮರಣೆ ಮಾಡುತ್ತಿದೆ. ಸೂರ್ಯ ನಮಸ್ಕಾರ ಎನ್ನುವುದು ದೈಹಿಕ ಫಿಟ್ ನೆಸ್ ನ ಭಾಗವಷ್ಟೇ ಎಂದು ಟೀಕಾಕಾರರಿಗೆ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ