ಟೀಂ ಇಂಡಿಯಾ ವೇಗಿ ಮಗಳ ಬರ್ತ್ ಡೇ ಆಚರಿಸಿಕೊಂಡಿದ್ದೇ ತಪ್ಪಾಯ್ತು!

ಗುರುವಾರ, 20 ಜುಲೈ 2017 (09:29 IST)
ನವದೆಹಲಿ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮತ್ತು ಕುಟುಂಬ ಮತ್ತೊಮ್ಮೆ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಿಂದೊಮ್ಮೆ ಪತ್ನಿ ಜತೆ ಗ್ಲಾಮರಸ್ ಫೋಟೋ ಪ್ರಕಟಿಸಿದ್ದಕ್ಕೆ ಸುದ್ದಿ ಮಾಡಿದ್ದ ಕ್ರಿಕೆಟಿಗ ಇದೀಗ ಮಗಳ ಬರ್ತ್ ಡೇ ಆಚರಿಸಿ ಸಂಪ್ರದಾಯವಾದಿಗಳಿಂದ ಬೈಸಿಕೊಂಡಿದ್ದಾರೆ.

 
ಪತ್ನಿಯ ದೇಹ ಕಾಣುವಂತಹ ಉಡುಪು ಧರಿಸಿದ ಫೋಟೋ ಪ್ರಕಟಿಸಿದ್ದು ಹಿಂದೊಮ್ಮೆ ಭಾರೀ ಸುದ್ದಿಯಾಗಿತ್ತು. ಇದೀಗ ತಮ್ಮ ಮಗಳು ಆಯಿರಾ ಬರ್ತ್ ಡೇ ಸೆಲೆಬ್ರೇಷನ್ ಫೋಟೋಗಳನ್ನು ಟ್ವಿಟರ್ ನಲ್ಲಿ ಪ್ರಕಟಿಸಿ ಸಂಪ್ರದಾಯವಾದಿಗಳ ಕಟು ಮಾತಿಗೆ ಗುರಿಯಾಗಿದ್ದಾರೆ.

ಈ ಫೋಟೋದಲ್ಲಿ ಶಮಿ ಪತ್ನಿ ಹಸೀನ್ ಜಹಾನ್ ತಲೆಗೆ ಬುರ್ಖಾ ಹಾಕಿಕೊಂಡಿರಲಿಲ್ಲ.  ಇದು ಇಸ್ಲಾಂ ಧರ್ಮದ ಪ್ರಕಾರ   ಅಪರಾಧ ಎಂದು ಸಂಪ್ರದಾಯವಾದಿಗಳು ತಕರಾರು ತೆಗೆದಿದ್ದಾರೆ. ಇನ್ನೊಂದೆಡೆ ವೇಗಿಯ ಅಭಿಮಾನಿಗಳು ಟೀಕಾಕಾರರ ಬಾಯಿ ಮುಚ್ಚಿಸುವಂತಹ ಕಾಮೆಂಟ್ ಮಾಡಿದ್ದಾರೆ. ನಿನ್ನೆಯಷ್ಟೇ ಇನ್ನೊಬ್ಬ ವೇಗಿ ಇರ್ಫಾನ್ ಪಠಾಣ್ ಕೂಡಾ ಪತ್ನಿಯ ಫೋಟೋ ಪ್ರಕಟಿಸಿ ಸಂಪ್ರದಾಯವಾದಿಗಳಿಂದ ಬೈಸಿಕೊಂಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಇದನ್ನೂ ಓದಿ..  ರಾಷ್ಟ್ರಪತಿ ಭವನದ ‘ನಾಥ’ ಯಾರಾಗ್ತಾರೆ? ಹೇಗೆ ನಡೆಯುತ್ತೆ ಮತ ಎಣಿಕೆ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ