ನಿರ್ಣಾಯಕ ಪಂದ್ಯದಲ್ಲಿ ಮುಸ್ತಫಿಜುರ್ ಅವರನ್ನು ಕಳೆದುಕೊಂಡಿದ್ದು ನಮಗೆ ಒಳಿತಾಗಲಿಲ್ಲ. ಆದರೆ ಬೌಲ್ಟ್ ಚೆನ್ನಾಗಿ ಬೌಲ್ ಮಾಡಿದರು. ಬೌಲ್ಟ್ ನೆಟ್‌ನಲ್ಲಿ ಚೆನ್ನಾಗಿ ಅಭ್ಯಾಸ ಮಾಡಿದ್ದಾರೆ. ಸೆಮಿಫೈನಲ್ ಅಥವಾ ಫೈನಲ್ ಆಡುವ ಅವಕಾಶ ಸಿಗಬಹುದೆಂದು ಅವರಿಗೆ ಗೊತ್ತಿತ್ತು. ಆದರೆ ಅವರು ಹೆಚ್ಚಿಗೆ ರನ್ ಕೊಟ್ಟಿದ್ದಾರೆಂದು ಹೇಳಲಾಗುವುದಿಲ್ಲ. ಇವೆಲ್ಲಾ ಆಟದ ಭಾಗ ಎಂದು ಭುವನೇಶ್ವರ್ ಹೇಳಿದ್ದಾರೆ.
ಬೌಲರುಗಳಿಗೆ ಡಿಫೆಂಡ್ ಮಾಡಲು ನಮ್ಮ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತವನ್ನು ಕಲೆಹಾಕಬೇಕು ಎಂದು ವಾರ್ನರ್ ಮುಂಚೆ ಹೇಳಿದ್ದರು. ಆದರೆ ಹೈದರಾಬಾದ್ ನಿನ್ನೆ ರಾತ್ರಿ ಮೊದಲ ಬೌಲಿಂಗ್ ತೆಗೆದುಕೊಂಡಿತು. ಈ ನಿರ್ಧಾರವನ್ನು ಕುರಿತು ಪ್ರಶ್ನಿಸಿದಾಗ, ಎದುರಾಳಿಗಳ ಬಲವನ್ನು ಮನಸ್ಸಿನಲ್ಲಿಟ್ಟುಕೊಂಡು ಉತ್ತಮ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಪ್ರತಿಕ್ರಿಯಿಸಿದರು.