ಜಸ್ಪ್ರೀತ್ ಬುಮ್ರಾಗೆ ಫಿಟ್ ನೆಸ್ ಟೆಸ್ಟ್ ಮಾಡಲು ಎನ್ ಸಿಎ ನಕಾರ: ದ್ರಾವಿಡ್ ಜತೆ ಮಾತುಕತೆಗೆ ಮುಂದಾದ ಗಂಗೂಲಿ

ಶನಿವಾರ, 21 ಡಿಸೆಂಬರ್ 2019 (09:47 IST)
ಬೆಂಗಳೂರು: ಗಾಯದ ಸಮಸ್ಯೆಯಿಂದಾಗಿ ತಮ್ಮದೇ ವಿಶೇಷ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದು ಪುನಶ್ಚೇತನ ಕಾರ್ಯದಲ್ಲಿ ತೊಡಗಿರುವ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾಗೆ ಫಿಟ್ ನೆಸ್ ಟೆಸ್ಟ್ ಮಾಡಲು ಎನ್ ಸಿಎ ನಿರಾಕರಿಸಿದೆ.


ಬುಮ್ರಾ ಎನ್ ಸಿಎಯಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ನಿರಾಕರಿಸಿದ್ದರು. ಬದಲಾಗಿ ತಮ್ಮದೇ ವೈಯಕ್ತಿಕ ವೈದ್ಯರ ಸಲಹೆ ಪಡೆದಿದ್ದರು. ಹೀಗಾಗಿ ರಾಹುಲ್ ದ್ರಾವಿಡ್ ನೇತೃತ್ವದ ಎನ್ ಸಿಎ ಬುಮ್ರಾ ಫಿಟ್ ನೆಸ್ ಟೆಸ್ಟ್ ನಡೆಸಲು ಹಿಂದೇಟು ಹಾಕಿದೆ.

ಈ ವಿಚಾರವೀಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೂ ತಲುಪಿದ್ದು, ಈ ವಿಚಾರದ ಕುರಿತಾಗಿ ದ್ರಾವಿಡ್ ಜತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಯಾವುದೇ ಆಟಗಾರನಿಗೂ ಎನ್ ಸಿಎಯೇ ಮೊದಲ ಮತ್ತು ಕೊನೆಯ ಆಯ್ಕೆಯಾಗಬೇಕು. ಬುಮ್ರಾರನ್ನು ವಿಶೇಷ ವೈದ್ಯರ ಬಳಿ ಕಳುಹಿಸುವಾಗ ನಾನು ಅಧಿಕಾರದಲ್ಲಿರಲಿಲ್ಲ. ಹೀಗಾಗಿ ವಿಷಯವೇನೆಂದು ತಿಳಿದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಗಂಗೂಲಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ