ಪಾಕ್ ಕ್ರಿಕೆಟಿಗ ಬಾಬರ್ ಅಝಮ್ ಕೊಹ್ಲಿಯಾಗಿದ್ದರೆ ಹೊಗಳಿ ಅಟ್ಟಕ್ಕೇರಿಸುತ್ತಿದ್ದರು!

ಗುರುವಾರ, 6 ಆಗಸ್ಟ್ 2020 (10:50 IST)
ಇಸ್ಲಾಮಾಬಾದ್: ಪಾಕಿಸ್ತಾನ ಸೀಮಿತ ಓವರ್ ಗಳ ನಾಯಕ ಬಾಬರ್ ಅಝಮ್ ರ ಬ್ಯಾಟಿಂಗ್ ಸಾಮರ್ಥ್ಯವನ್ನು ಕೊಂಡಾಡಿರುವ ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಅವರಿಗೆ ತಕ್ಕ ಪ್ರಚಾರ ಸಿಗುತ್ತಿಲ್ಲ ಎಂದಿದ್ದಾರೆ.


ಬಾಬರ್ ಅಝಮ್ ಸ್ಥಾನದಲ್ಲಿ ವಿರಾಟ್ ಕೊಹ್ಲಿಯೇನಾದರೂ ಇದ್ದಿದ್ದರೆ ಅವರಿಗೆ ಭರ್ಜರಿ ಪ್ರಚಾರ ಸಿಗುತ್ತಿತ್ತು. ಎಲ್ಲರೂ ಹೊಗಳಿ ಅಟ್ಟಕ್ಕೇರಿಸುತ್ತಿದ್ದರು. ಆದರೆ ಅವರು ಕೊಹ್ಲಿಯಲ್ಲವಲ್ಲಾ? ಅದಕ್ಕೇ ಅವರ ಬಗ್ಗೆ ಯಾರೂ ಮಾತನಾಡಲ್ಲ ಎಂದು ಹುಸೈನ್ ಹೇಳಿದ್ದಾರೆ.

ಬಾಬರ್ ಕೂಡಾ ವಿಶ್ವದ ಹಾಲಿ ಶ್ರೇಷ್ಠ ಬ್ಯಾಟ್ಸ್ ಮನ್ ಗಳಾದ ವಿರಾಟ್, ಸ್ಟೀವ್ ಸ್ಮಿತ್ ಸಮನಾದ ಸಾಮರ್ಥ್ಯವಿರುವವರು. ಆದರೆ ಅವರ ಬಗ್ಗೆ ಯಾರೂ ಮಾತನಾಡಲ್ಲ ಎಂದು ಹುಸೈನ್ ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ