ಫೋನೂ ಇಲ್ಲಾ, ಇಂಟರ್ನೆಟ್ಟೂ ಇಲ್ಲ, ವಿರಾಟ್ ಕೊಹ್ಲಿ ಏನು ಮಾಡಿದ್ರು ಗೊತ್ತಾ?

ಗುರುವಾರ, 15 ಡಿಸೆಂಬರ್ 2016 (11:16 IST)
ಚೆನ್ನೈ: ವಾರ್ಧಾ ಚಂಡಮಾರುತದಿಂದಾಗಿ ಚೆನ್ನೈಯಲ್ಲಿ ಫೋನೂ ಇಲ್ಲ, ವೈ ಫೈ ಕೂಡಾ ಇಲ್ಲ. ಟೀಂ ಇಂಡಿಯಾ ಈಗಾಗಲೇ ಅಂತಿಮ ಟೆಸ್ಟ್ ಆಡಲು ಚೆನ್ನೈಗೆ ಬಂದಿಳಿದಿದೆ. ಆದರೆ ನೆಟ್ ಪ್ರಾಕ್ಟೀಸ್ ಕೂಡಾ ಕ್ಯಾನ್ಸಲ್ ಆಗಿತ್ತು. ಇನ್ನೇನು ಮಾಡೋದು?

ವಿರಾಟ್ ಕೊಹ್ಲಿ ಮತ್ತು ತಂಡ ಹೋಟೆಲ್ ರೂಂ ನಲ್ಲಿ ಕುಳಿತುಕೊಂಡು ಪ್ಲೇಸ್ಟೇಷನ್ ನಲ್ಲಿ ಫುಟ್ ಬಾಲ್ ಆಡುತ್ತಾ ಕಾಲ ಕಳೆದರು. ಹೊರಗಡೆ ಸುತ್ತಾಡಲು ಮರಗಳು ಬಿದ್ದು ರಸ್ತೆಯೆಲ್ಲಾ ಬ್ಲಾಕ್ ಆಗಿದೆ. ಹೀಗಿರುವಾಗ ಸಮಯ ಕಳೆಯಲು ಕೊಹ್ಲಿ ಪಡೆ ಹೀಗೊಂದು ದಾರಿ ಕಂಡುಕೊಂಡಿತು.

ಇದೇ ವೇಳೆ ಪಂದ್ಯ ನಿಗದಿಯಾದ ಸಮಯಕ್ಕೇ ಆರಂಭವಾಗಲಿದೆ ಎಂದು ಬಿಸಿಸಿಐ ತಿಳಿಸಿದೆ. ಈಗಾಗಲೇ ದುರಸ್ಥಿ ಕಾರ್ಯ ಬಹುತೇಕ ಪೂರ್ಣಗೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ