ನಿವೃತ್ತಿಯ ಬಗ್ಗೆಯೂ ಯೋಚಿಸಿದ್ದ ಯುವರಾಜ್ ಸಿಂಗ್ !

ಶುಕ್ರವಾರ, 20 ಜನವರಿ 2017 (09:32 IST)
ಕಟಕ್: ಕೆಲವು ವರ್ಷಗಳ ನಂತರ ತಂಡಕ್ಕೆ ಬಂದು ಅದೂ ಈತನನ್ನು ಆಯ್ಕೆ ಮಾಡಿದ್ದರ ಔಚಿತ್ಯವೇನು ಎಂದು ಪ್ರಶ್ನಿಸುವ ಸಂದರ್ಭದಲ್ಲಿ ಶತಕ ಗಳಿಸಿ ತಂಡಕ್ಕೆ ಆಸರೆಯಾಗುವುದು ಎಂದರೆ ಎಂತಹ ಕ್ರಿಕೆಟಿಗನಿಗೂ ಮರೆಯಲಾರದ ಕ್ಷಣ. ಯುವರಾಜ್ ಸಿಂಗ್ ಗೂ ಅದೇ ಆಗಿತ್ತು.

“ಇದು ನನ್ನ ವೃತ್ತಿ ಜೀವನ ಸರ್ವ ಶ್ರೇಷ್ಠ ಇನಿಂಗ್ಸ್” ಎಂದು ಯುವಿ ಪಂದ್ಯಾ ನಂತರ ಪಂದ್ಯ ಪುರುಷ ಪ್ರಶಸ್ತಿ ಸ್ವಿಕರಿಸಿ ಮಾತನಾಡುವ ಹೇಳಿದ್ದಾರೆ.  “ಕಳೆದ ಬಾರಿ ನಾನು ಶತಕ ಗಳಿಸಿದ್ದು 2011 ರ ವಿಶ್ವಕಪ್ ನಲ್ಲಿ. ಇಂತಹದ್ದೊಂದು ಕಮ್ ಬ್ಯಾಕ್ ಮಾಡಲು ದೇಸೀಯ ಕ್ರಿಕೆಟ್ ಸಾಕಷ್ಟು ಸಹಾಯ ಮಾಡಿದೆ.  ಅಲ್ಲದೆ ಫಿಟ್ ನೆಸ್ ಬಗ್ಗೆ ನನ್ನ ಹಿರಿಯರಾದ ಸಚಿನ್ ತೆಂಡುಲ್ಕರ್, ಅನಿಲ್ ಕುಂಬ್ಳೆ ಬಳಿ ಸಾಕಷ್ಟು ಸಲಹೆ ಪಡೆದಿದ್ದೆ” ಎಂದು ಯುವರಾಜ್ ಹೇಳಿಕೊಂಡಿದ್ದಾರೆ.

“ಕ್ಯಾನ್ಸರ್ ನಿಂದ ಗುಣವಾಗಿ ಬಂದ ಮೇಲೆ ನನಗೆ ಫಿಟ್ ನೆಸ್ ಮೇಲೆ ಸಾಕಷ್ಟು ಬೆವರು ಸುರಿಸಬೇಕಾಯಿತು. ನನಗೆ ತಂಡದಲ್ಲಿ ಖಾಯಂ ಸ್ಥಾನ ದೊರಕಲಿಲ್ಲ. ಸಾಕಷ್ಟು ಬಾರಿ ನಾನು ಕ್ರಿಕೆಟ್ ನಲ್ಲಿ ಮುಂದುವರಿಯಬೇಕೇ ಬೇಡವೇ ಎಂದು ಯೋಚಿಸಿದ್ದೂ ಉಂಟು. ಆದರೆ ಸವಾಲುಗಳಿಗೆ ಹೆದರುವ ಜಾಯಮಾನ ನನ್ನದಲ್ಲ. ಹಾಗಾಗಿ ಕಠಿಣ ಪರಿಶ್ರಮ ಪಟ್ಟೆ. ಇಂದು ಅದಕ್ಕೆ ಬೆಲೆ ಪಡೆದಿದ್ದೇನೆ” ಎಂದು ಭಾವನಾತ್ಮಕವಾಗಿ ಹೇಳಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ