ಆಸ್ಟ್ರೇಲಿಯಾವನ್ನು ಸೋಲಿಸುವ ತಾಕತ್ತಿರೋದು ಟೀಂ ಇಂಡಿಯಾಕ್ಕೆ ಮಾತ್ರ ಎಂದ ಮಾಜಿ ಕ್ರಿಕೆಟಿಗ

ಮಂಗಳವಾರ, 3 ಡಿಸೆಂಬರ್ 2019 (09:07 IST)
ಸಿಡ್ನಿ: ಪಾಕಿಸ್ತಾನದ ವಿರುದ್ಧ 2-0 ಅಂತರದಿಂದ ಟೆಸ್ಟ್ ಸರಣಿ ಗೆದ್ದ ಬಳಿಕ ಆಸ್ಟ್ರೇಲಿಯಾ ಮತ್ತೆ ವಿಶ್ವ ಕ್ರಿಕೆಟ್ ನಲ್ಲಿ ಬಲಾಢ್ಯವಾಗಿರುವ ಸೂಚನೆ ನೀಡಿದೆ.


ಹೀಗಾಗಿ ಆಸ್ಟ್ರೇಲಿಯಾವನ್ನು ಆಸ್ಟ್ರೇಲಿಯಾದಲ್ಲೇ ಮಣಿಸುವ ತಾಕತ್ತು ಇರುವ ಏಕೈಕ ಎದುರಾಳಿ ಎಂದರೆ ಬಹುಶಃ ಅದು ಟೀಂ ಇಂಡಿಯಾ ಮಾತ್ರ ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.

‘ಇಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾವನ್ನು ಆಸ್ಟ್ರೇಲಿಯಾದಲ್ಲೇ ಸೋಲಿಸುವುದು ಕಷ್ಟ. ಒಂದು ವೇಳೆ ಆ ಸಾಮರ್ಥ್ಯವಿದ್ದರೆ ಅದು ಭಾರತಕ್ಕೆ ಮಾತ್ರ’ ಎಂದು ವಾನ್ ಹೊಗಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ