ಇಂಗ್ಲಿಷ್ ಪತ್ರಕರ್ತರನ್ನು ನೋಡಿ ಪಾಕ್ ಕ್ರಿಕೆಟ್ ತಂಡದ ನಾಯಕನಿಗೆ ಫುಲ್ ಗಾಬರಿ!

ಬುಧವಾರ, 14 ಜೂನ್ 2017 (08:37 IST)
ಲಂಡನ್: ವಿದೇಶ ಪ್ರವಾಸ ಹೋದಾಗ ಏಷ್ಯನ್ ಕ್ರಿಕೆಟಿಗರು ಇಂಗ್ಲಿಷ್ ಅರ್ಥವಾಗದೇ ತಡಬಡಾಯಿಸುವುದು ಮಾಮೂಲಿ. ಪಾಕ್ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಗೂ ಇಂಗ್ಲೆಂಡ್ ನಲ್ಲಿ ಅಂತಹದ್ದೇ ಅನುಭವವಾಗಿದೆ.

 
ಲಂಕಾ ವಿರುದ್ಧ ಗೆದ್ದು ಸೆಮಿಫೈನಲ್ ಗೆ ಅರ್ಹತೆ ಪಡೆದ ಪಾಕ್ ನಾಯಕ ಪತ್ರಿಕಾಗೋಷ್ಠಿಗೆ ಫುಲ್ ತಯಾರಿ ನಡೆಸಿ ಆಗಮಿಸಿದ್ದರು. ಲಂಕಾ ವಿರುದ್ಧ ಅವರ ಕ್ಯಾಚಿಂಗ್ ಪ್ರಮಾದದ ಬಗ್ಗೆಯೆಲ್ಲಾ ಪತ್ರಕರ್ತರು ಹಿಗ್ಗಾ ಮುಗ್ಗಾ ಪ್ರಶ್ನೆ ಕೇಳುತ್ತಾರೆಂದು ಅವರಿಗೆ ಗೊತ್ತಿತ್ತು. ಆದರೆ ಅದಕ್ಕೆ ತಯಾರಾಗಿ ಬಂದಿದ್ದವರಿಗೆ ಅಲ್ಲಿದ್ದ ಪತ್ರಕರ್ತರ ಹಿಂಡು ನೋಡಿ ಗಾಬರಿಯಾಯಿತು.

ಪಕ್ಕಾ ಹಿಂದಿ ಮತ್ತು ಉರ್ದು ಭಾಷೆ ಮಾತ್ರ ಸರಿಯಾಗಿ ಮಾತನಾಡಬಲ್ಲ ಸರ್ಫರಾಜ್ ಅಲ್ಲಿದ್ದ ಆಂಗ್ಲ ಭಾಷೆಯ ಪತ್ರಕರ್ತರನ್ನು ನೋಡಿ ಗಾಬರಿಯಾದರು. ‘ಎಲ್ಲರೂ ಆಂಗ್ಲರೇ ಇದ್ದೀರಾ?’ ಎಂದು ಫುಲ್ ನರ್ವಸ್ ಆಗಿ ಕೇಳಿದ ಸರ್ಫರಾಜ್ ತಮಗೆ ಗೊತ್ತಿದ್ದ ಭಾಷೆಯಲ್ಲೇ ಪತ್ರಕರ್ತರಿಗೆ ಉತ್ತರಿಸಿದರು.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ