ನಿವೃತ್ತಿ ವೇಳೆ ಗಂಗೂಲಿ, ಅನಿಲ್ ಕುಂಬ್ಳೆ ನೆನೆಸಿಕೊಂಡ ಪಾರ್ಥಿವ್ ಪಟೇಲ್

ಗುರುವಾರ, 10 ಡಿಸೆಂಬರ್ 2020 (09:57 IST)
ಮುಂಬೈ: ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಕ್ರಿಕೆಟಿಗ ಪಾರ್ಥಿವ್ ಪಟೇಲ್ ತಮ್ಮ ವಿದಾಯ ಸಂದರ್ಭದಲ್ಲಿ ತಮಗೆ ನಾಯಕರಾಗಿದ್ದ ಸೌರವ್ ಗಂಗೂಲಿ ಮತ್ತು ಅನಿಲ್ ಕುಂಬ್ಳೆಯನ್ನು ಸ್ಮರಿಸಿಕೊಂಡಿದ್ದಾರೆ.


ಗಂಗೂಲಿ ನಾಯಕತ್ವದಲ್ಲಿ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಪಾರ್ಥಿವ್ ಬಳಿಕ ವಿಕೆಟ್ ಕೀಪರ್ ಆಗಿ ಸ್ಪಿನ್ ಬೌಲಿಂಗ್ ಸಂದರ್ಭದಲ್ಲಿ ವಿಕೆಟ್ ಕೀಪಿಂಗ್ ಮಾಡುವ ಬಗ್ಗೆ ಸ್ಪಿನ್ ಗಾರುಡಿಗ ಅನಿಲ್ ಕುಂಬ್ಳೆಯಿಂದಲೂ ಸಾಕಷ್ಟು ಕಲಿತಿದ್ದರು. ಹೀಗಾಗಿ ನಿವೃತ್ತಿ ಸಂದರ್ಭದಲ್ಲಿ ಇವರಿಬ್ಬರನ್ನೂ ನೆನೆಸಿಕೊಂಡಿರುವ ಪಾರ್ಥಿವ್ ಇಬ್ಬರಿಂದ ನಾನು ಸಾಕಷ್ಟು ಕಲಿತಿರುವೆ. ಇಬ್ಬರನ್ನೂ ಸದಾ ಸ್ಮರಿಸಿಕೊಳ್ಳುವೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ