ಪಠಾಣರು ನಮ್ಮ ಗಡಿ ಕಾಯುತ್ತಿದ್ದಾರೆ: ಭಾರತಕ್ಕೆ ಆಫ್ರಿದಿ ಎಚ್ಚರಿಕೆ

ಮಂಗಳವಾರ, 4 ಅಕ್ಟೋಬರ್ 2016 (15:56 IST)
ಸ್ಪೋಟಕ ಬ್ಯಾಟಿಂಗ್‌ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆಯುತ್ತಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಮತ್ತೀಗ ಆಫ್ ಫೀಲ್ಡ್‌ನಲ್ಲಿ ಕೂಡ ತಮ್ಮ ದೇಶದ ಪರ ಬ್ಯಾಟ್ ಬೀಸಿದ್ದಾರೆ.

ಸೀಮಿತ ದಾಳಿಯ ಬಳಿಕ ಎರಡು ದೇಶಗಳು ಶಾಂತಿ ಕಾಯ್ದುಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದ ಆಫ್ರಿದಿ ಮತ್ತೀಗ ನಾಯಿ ಬಾಲ ಡೊಂಕು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಶಾಂತಿ ಸ್ತುತಿ ಮಾಡಿದ ಬೆನ್ನಲ್ಲೇ ಅವರು ಅವರು ಭಾರತೀಯ ಸೇನೆಗೆ ಎಚ್ಚರಿಕೆ ನೀಡಿದ್ದಾರೆ. 
 
ಪಠಾಣರು ನಮ್ಮ ಗಡಿ ಕಾಯುತ್ತಿದ್ದಾರೆ, ಎಚ್ಚರವಿರಲಿ ಎಂದು ಅವರು ಹೇಳಿದ್ದಾರೆ. 
 
ಎರಡು ದೇಶಗಳ ನಡುವೆ ಹೊತ್ತಿ ಉರಿಯುತ್ತಿರುವ ದ್ವೇಷಾಗ್ನಿಗೆ ತುಪ್ಪ ಸುರಿದ ಕ್ರಿಕೆಟಿಗರ ಸಾಲಲ್ಲಿ ಆಫ್ರಿದಿ ಮಾತ್ರವಿಲ್ಲ. ಈ ಹಿಂದೆ ದಾವೇದ್ ಮಿಯಾಂದಾದ ಕೂಡ ಪ್ರಚೋದನಾತ್ಮಕ ಟ್ವೀಟ್ ಮಾಡಿದ್ದರು. ಭಾರತದ ಮೇಲೆ ದಾಳಿ ಮಾಡುವಂತೆ ಅವರು ತಮ್ಮ ದೇಶಕ್ಕೆ ಸಲಹೆ ನೀಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ