ಪುತ್ರಿ ಜೀವಾ ಕಿಡ್ನ್ಯಾಪ್ ಮಾಡುವುದಾಗಿ ಧೋನಿಗೇ ಬೆದರಿಕೆ!

ಶುಕ್ರವಾರ, 10 ಮೇ 2019 (07:00 IST)
ಚೆನ್ನೈ: ಐಪಿಎಲ್‍ ಟೂರ್ನಿಯ ನಡುವೆ ಆಗಾಗ ಧೋನಿ ಪುತ್ರಿ ಜೀವಾ ತುಂಟಾಟಗಳು ಆಗಾಗ ಸುದ್ದಿಯಾಗುತ್ತಲೇ ಇದೆ. ಇದರ ನಡುವೆ ಕ್ಯೂಟ್ ಜೀವಾರನ್ನು ಕಿಡ್ನ್ಯಾಪ್ ಮಾಡುವುದಾಗಿ ಧೋನಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲಕಿ ಪ್ರೀತಿ ಜಿಂಟಾ ಎಚ್ಚರಿಕೆ ನೀಡಿದ್ದಾರೆ!


ಮುದ್ದು ಜೀವಾಗೆ ಮನಸೋತಿರುವ ಪ್ರೀತಿ ಜಿಂಟಾ ಧೋನಿ ಬಳಿ ಈ ರೀತಿ ತಮಾಷೆ ಮಾಡಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದ ಬಳಿಕ ಪ್ರೀತಿ ಧೋನಿ ಪುತ್ರಿಯ ಬಗ್ಗೆ ಈ ರೀತಿ ಹೇಳಿದ್ದಾರೆ.

‘ಕ್ಯಾಪ್ಟನ್ ಕೂಲ್ ಗೆ ಅನೇಕ ಅಭಿಮಾನಿಗಳಿದ್ದಾರೆ. ಆದರೆ ನನ್ನ ಅಭಿಮಾನ ಧೋನಿಯಿಂದ ಅವರ ಪುತ್ರಿ ಜೀವಾ ಕಡೆಗೆ ವಾಲುತ್ತಿದೆ. ನಾನು ಈ ಮೂಲಕ ಧೋನಿಗೆ ಹೇಳುತ್ತಿದ್ದೇನೆ, ಬಿ ಕೇರ್ ಫುಲ್, ನಾನು ಬಹುಶಃ ಜೀವಾಳನ್ನು ಕಿಡ್ನ್ಯಾಪ್ ಮಾಡಬಹುದು’ ಎಂದು ಪ್ರೀತಿ ತಮಾಷೆಯಾಗಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ