ಪೃಥ್ವಿ ಶಾರನ್ನು ಕರೆಸಿಕೊಂಡು ಮಯಾಂಕ್, ಕೆಎಲ್ ರಾಹುಲ್ ಗೆ ಅವಮಾನಿಸಿತೇ ಟೀಂ ಇಂಡಿಯಾ?!

ಸೋಮವಾರ, 5 ಜುಲೈ 2021 (10:03 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆರಂಭಿಕ ಶುಬ್ನಂ ಗಿಲ್ ಗಾಯಗೊಂಡು ಹೊರಬೀಳುತ್ತಿದ್ದಂತೇ ಲಂಕಾ ಸರಣಿಯಲ್ಲಿದ್ದ ಪೃಥ್ವಿ ಶಾರನ್ನು ಆಂಗ್ಲರ ನಾಡಿಗೆ ಕರೆಸಿಕೊಳ್ಳುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.


ಈಗಾಗಲೇ ಇಂಗ್ಲೆಂಡ್ ನಲ್ಲಿರುವ ತಂಡದಲ್ಲಿ ಗಿಲ್ ಗಾಯಗೊಂಡರೂ ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ನಡುವೆ ಆರಂಭಿಕ ಸ್ಥಾನಕ್ಕೆ ಪೈಪೋಟಿಯಿದೆ. ಈಗಿನ ತಂಡದಲ್ಲಿ ಗಿಲ್ ಇಲ್ಲದೇ ಹೋದರೂ ಆರಂಭಿಕ ಸ್ಥಾನಕ್ಕೆ ಆಟಗಾರರ ಕೊರತೆಯೇನೂ ಇಲ್ಲ.

ಹಾಗಿದ್ದರೂ ಈ ಇಬ್ಬರೂ ಅನುಭವಿ, ಪ್ರತಿಭಾವಂತ ಆಟಗಾರರನ್ನು ಕಡೆಗಣಿಸಿ ಪೃಥ್ವಿ ಶಾರನ್ನು ಕರೆಸಿಕೊಳ್ಳುತ್ತಿರುವುದು ಪ್ರಶ್ನೆ ಮೂಡಿಸಿದೆ. ಮಾಜಿ ನಾಯಕ ಕಪಿಲ್ ದೇವ್ ಅಂತೂ ಇದು ಈಗಾಗಲೇ ತಂಡದಲ್ಲಿರುವ ಆರಂಭಿಕ ಆಟಗಾರರಿಗೆ ಮಾಡಿದ ಅವಮಾನ ಎಂದಿದ್ದಾರೆ. ಗಿಲ್ ಇಲ್ಲದೇ ಹೋದರೆ ರಾಹುಲ್ ಅಥವಾ ಮಯಾಂಕ್ ಗೆ ಅವಕಾಶ ನೀಡಬಹುದಿತ್ತು. ಇಬ್ಬರೂ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಅನುಭವ ಹೊಂದಿದ್ದಾರೆ. ಹಾಗಿದ್ದರೂ ಶ್ರೀಲಂಕಾ ಸರಣಿಯಲ್ಲಿದ್ದ ಪೃಥ್ವಿ ಶಾರನ್ನು ಕರೆಸಿಕೊಳ್ಳುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಹಲವರಿಗೆ ಮೂಡಿದೆ. ಈ ಮೂಲಕ ರಾಹುಲ್ ಮತ್ತು ಮಯಾಂಕ್ ರನ್ನು ತಂಡದಿಂದ ಹೊರಗಿಡುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ