ಶಿವಾಜಿ ಸುರತ್ಕಲ್ ಕನ್ನಡ ಸಿನಿಮಾ ವೀಕ್ಷಿಸಿದ ಕ್ರಿಕೆಟಿಗ ರಾಹುಲ್ ದ್ರಾವಿಡ್

ಬುಧವಾರ, 19 ಫೆಬ್ರವರಿ 2020 (09:17 IST)
ಬೆಂಗಳೂರು: ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ ಸಿನಿಮಾದ ಸೆಲೆಬ್ರಿಟಿ ಶೋಗೆ ಅಚ್ಚರಿಯ ಅತಿಥಿಯ ಆಗಮನವಾಗಿದೆ. ಕ್ರಿಕೆಟಿಗ ರಾಹುಲ್ ದ್ರಾವಿಡ್ ಸಿನಿಮಾದ ಮೊದಲ ಶೋ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಬೆಂಗಳೂರಿನ ಎಸ್ ಆರ್ ವಿ ಚಿತ್ರಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಪ್ರದರ್ಶನಕ್ಕೆ ಪತ್ನಿ ಸಮೇತ ಆಗಮಿಸಿದ್ದ ದ್ರಾವಿಡ್, ಚಿತ್ರದ ನಾಯಕ ರಮೇಶ್ ಅರವಿಂದ್, ನಿರ್ದೇಶಕ ಆಕಾಶ್ ಶ್ರೀವತ್ಸ ಹಾಗೂ ಇಡೀ ತಂಡದ ಜತೆಗೆ ಕೂತು ವೀಕ್ಷಿಸಿದ್ದಾರೆ.

ಬಳಿಕ ಮಾತನಾಡಿದ ದ್ರಾವಿಡ್ ನನಗೆ ಇಂತಹದ್ದೊಂದು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ. ಸಿನಿಮಾ ತುಂಬಾ ಚೆನ್ನಾಗಿ ಎಲ್ಲರೂ ನೋಡಿ ಎಂದಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಹಸ್ತಾಕ್ಷರದ ಬ್ಯಾಟ್ ನ್ನು ಚಿತ್ರತಂಡಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ