ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೆ ಟಾಂಗ್ ಕೊಟ್ಟ ಯುವರಾಜ್ ಸಿಂಗ್

ಶುಕ್ರವಾರ, 3 ಏಪ್ರಿಲ್ 2020 (11:13 IST)
ಮುಂಬೈ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುವುದು ಸಾಮಾನ್ಯ. ಆದರೆ ಈ ಬಾರಿ ರವಿಶಾಸ್ತ್ರಿಗೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಟಾಂಗ್ ಕೊಟ್ಟಿದ್ದಾರೆ.


2011 ರ ವಿಶ್ವಕಪ್ ಗೆಲುವಿನ ವಾರ್ಷಿಕೋತ್ಸವದ ದಿನವಾದ ನಿನ್ನೆ ರವಿಶಾಸ್ತ್ರಿ ಶುಭ ಕೋರಿದ್ದರು. ಈ ವೇಳೆ ಸಚಿನ್ ತೆಂಡುಲ್ಕರ್ ಮತ್ತು ವಿರಾಟ್ ಕೊಹ್ಲಿ ಟ್ವಿಟರ್ ಖಾತೆಯನ್ನು ಮಾತ್ರ ಟ್ಯಾಗ್ ಮಾಡಿದ್ದರು. ಆದರೆ ನಾಯಕ ಧೋನಿ, ಯುವರಾಜ್ ಸಿಂಗ್ ಪ್ರಸ್ತಾಪಿಸಲಿಲ್ಲ.

ಇದೇ ಕಾರಣಕ್ಕೆ ಶಾಸ್ತ್ರಿ ಟ್ವೀಟ್ ಗೆ ಪ್ರತಿಕ್ರಿಯಿಸಿದ ಯುವಿ ‘ಧನ್ಯವಾದ ಸೀನಿಯರ್. ನಾನು, ಮಹಿ ಕೂಡಾ ತಂಡದ ಭಾಗವಾಗಿದ್ದೆವು, ನಮ್ಮನ್ನೂ ಟ್ಯಾಗ್ ಮಾಡಬಹುದು’ ಎಂದು ಸ್ಮೈಲಿ ಇಮೋಜಿ ಮೂಲಕ ಟಾಂಗ್ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ