ಮೊಯಿನ್ ಆಲಿ ಬೌಲಿಂಗ್ ನೋಡಿ ಕಲಿ ಎಂದ ಅಭಿಮಾನಿಗಳಿಗೆ ರವಿಚಂದ್ರನ್ ಅಶ್ವಿನ್ ಕೊಟ್ಟ ಉತ್ತರವಿದು!

ಮಂಗಳವಾರ, 31 ಜನವರಿ 2017 (10:18 IST)
ಚೆನ್ನೈ: ಮೈದಾನದಲ್ಲೇ ಎದುರಾಳಿಗಳು ಮೆರೆಯುವುದನ್ನು ಸುಮ್ಮನೇ ನೋಡುತ್ತಾ ಕೂರುವ ಜಾಯಮಾನ ರವಿಚಂದ್ರನ್ ಅಶ್ವಿನ್ ರದ್ದಲ್ಲ. ಹೀಗಿರುವಾಗ ತಮ್ಮ ಟ್ವಿಟರ್ ಪೇಜ್ ನಲ್ಲಿ ಕೆಣಕುವಂತಹ ಮೆಸೇಜ್ ಹಾಕಿದರೆ ಸುಮ್ಮನಿರುತ್ತಾರೆಯೇ?

 
ಕಾನ್ಪುರದಲ್ಲಿ ನಡೆದ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಅದ್ಭುತವಾಗಿ ಬೌಲಿಂಗ್ ಮಾಡಿದ ಇಂಗ್ಲೆಂಡ್ ನ ಸ್ಪಿನ್ನರ್ ಮೊಯಿನ್ ಅಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇದನ್ನು ಉಲ್ಲೇಖಿಸಿ ಕೆಲವು ಅಭಿಮಾನಿಗಳು ಅಶ್ವಿನ್ ಗೆ ಟ್ವಿಟರ್ ನಲ್ಲಿ “ಅಶ್ವಿನ್ ನೋಡಿದಿರಾ ಮೊಯಿನ್ ಅಲಿ ಬೌಲಿಂಗ್? ಅವರನ್ನು ನೋಡಿ ಸ್ವಲ್ಪ ಕಲಿತುಕೊಳ್ಳಿ. ಹೇಗಿದ್ದರೂ ನೀವು ಈಗ ಆಡುತ್ತಿಲ್ಲ” ಎಂದು ಕೆಣಕಿದ್ದರು.

ಇದಕ್ಕೆ ತಕ್ಕ ಉತ್ತರ ಕೊಟ್ಟ ಅಶ್ವಿನ್ “ನಾನು ಅಲಿ ಬೌಲಿಂಗ್ ಸ್ಪೆಲ್ ಮುಗಿದ ಮೇಲೆ ಟಿವಿ ಆನ್ ಮಾಡಿದೆ” ಎಂದು ತಿರುಗೇಟು ನೀಡಿದ್ದಾರೆ. ವಿಶ್ವದ ನಂ.1 ಸ್ಪಿನ್ನರ್ ಎಂದ ಮೇಲೆ ಕೆಣಕುವಾಗಲೂ ಸುಮ್ಮನಿದ್ದರಾದೀತೇ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ