ಮಾತಲ್ಲಿ ದ್ರಾವಿಡ್ ಗೆ ಜೈಕಾರ ಹಾಕಿ ಸಚಿನ್ ಬೇಕು ಎಂದರಾ ರವಿ ಶಾಸ್ತ್ರಿ?

ಬುಧವಾರ, 19 ಜುಲೈ 2017 (12:26 IST)
ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆಯಾದ ಮೇಲೆ ತಮಗೆ ಬೇಕಾದ ಸಹಾಯಕ ಸಿಬ್ಬಂದಿಗಳನ್ನು ತಂಡಕ್ಕೆ ಕರೆಸಿಕೊಳ್ಳುತ್ತಿರುವ ರವಿ ಶಾಸ್ತ್ರಿ ಇದೀಗ ರಾಹುಲ್ ದ್ರಾವಿಡ್ ರನ್ನು ಸಂಪೂರ್ಣ ಮೂಲೆಗುಂಪು ಮಾಡಲು ಹೊರಟಿದ್ದಾರಾ? ಹಾಗೊಂದು ವರದಿ ಆಂಗ್ಲ ಮಾಧ್ಯಮವೊಂದರಲ್ಲಿ ಪ್ರಕಟವಾಗಿದೆ.


 
ಬ್ಯಾಟಿಂಗ್ ಸಲಹೆಗಾರರಾಗಿ ಆಯ್ಕೆಯಾಗಿರುವ ರಾಹುಲ್ ದ್ರಾವಿಡ್ ಸಲಹೆ ಭಾರತ ಕ್ರಿಕೆಟ್ ತಂಡಕ್ಕೆ ಅತ್ಯಮೂಲ್ಯ ಎಂದು ಹೊಗಳುತ್ತಲೇ ರವಿಶಾಸ್ತ್ರಿ ಸದ್ದಿಲ್ಲದೇ ಆ ಸ್ಥಾನಕ್ಕೆ ಸಚಿನ್ ತೆಂಡುಲ್ಕರ್ ರನ್ನು ಕರೆತರಲು ಯತ್ನ ನಡೆಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕ್ರಿಕೆಟ್ ಸಲಹಾ ಸಮಿತಿ ಸದಸ್ಯರೂ ಆಗಿರುವ ಸಚಿನ್ ತೆಂಡುಲ್ಕರ್ ಅವರನ್ನು ವಿದೇಶ ಸರಣಿಗಳಿಗೆ ಬ್ಯಾಟಿಂಗ್ ಸಲಹೆಗಾರರಾಗಿ ಮಾಡಿ ಎಂದು ರವಿಶಾಸ್ತ್ರಿ ಬಿಸಿಸಿಐ ಮುಂದೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಪತ್ರಿಕಾ ಹೇಳಿಕೆಯೊಂದರಲ್ಲಿ ದ್ರಾವಿಡ್ ಮತ್ತು ಜಹೀರ್ ಖಾನ್ ಸಲಹೆ ಭಾರತ ತಂಡಕ್ಕೆ ಅತ್ಯಮೂಲ್ಯ ಎಂದು ಶಾಸ್ತ್ರಿ ಹೇಳಿದ್ದರು. ಆದರೆ ಸಚಿನ್ ರನ್ನು ಸಲಹೆಗಾರರಾಗಿ ತಂಡಕ್ಕೆ ಕರೆಸಿಕೊಳ್ಳುವ ಬಗ್ಗೆ ಬಿಸಿಸಿಐ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ..  ‘ನಾನು ಡಿಸೈಡ್ ಮಾಡಿದ್ರೆ ಮುಗಿದೋಯ್ತು.. ನಾನೇ ನಾಯಕ’

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ