ಕೆಂಪು ಮತ್ತು ಗುಲಾಬಿ ಚೆಂಡುಗಳು ಒಂದೇ ರೀತಿ ವರ್ತಿಸುತ್ತವೆ: ಗಂಭೀರ್

ಶನಿವಾರ, 10 ಸೆಪ್ಟಂಬರ್ 2016 (15:17 IST)
ಅನುಭವಿ ಆರಂಭಿಕ ಆಟಗಾರ, ಸದ್ಯ ನಡೆಯುತ್ತಿರುವ ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಇಂಡಿಯಾ ಬ್ಲ್ಯೂ ತಂಡವನ್ನು ಮುನ್ನಡೆಸುತ್ತಿರುವ ಗೌತಮ್ ಗಂಭೀರ್, ಗುಲಾಬಿ ಚೆಂಡು, ಥೇಟ್ ಕೆಂಪು ಚೆಂಡಿನಂತೆ ವರ್ತಿಸುತ್ತದೆ ಎಂದು ಹೇಳುವುದರ ಮೂಲಕ ಗುಲಾಬಿ ಚೆಂಡಿನ ಬಗ್ಗೆ ಹರಿದಾಡುತ್ತಿರುವ ಸಂಶಯಗಳನ್ನು ತಳ್ಳಿ ಹಾಕಿದ್ದಾರೆ.

ಸಂದರ್ಭಕ್ಕೆ ಅವಲಂಬಿಸಿ ಪಿಂಕ್ ಬಾಲ್ ಎದುರಿಸುವಾಗ ಬ್ಯಾಟ್ಸ್‌ಮನ್ ಕೆಲ ಸಣ್ಣಪುಟ್ಟ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ, ಎಂದು ಪಿಂಕ್ ಬಾಲ್ ಬಳಸಿ ಹೊನಲು ಬೆಳಕಿನಲ್ಲಿ ಆಡಿಸಲಾಗಿದ್ದ ದುಲೀಪ್ ಟ್ರೋಫಿ ಲೀಗ್ ಪಂದ್ಯಗಳಲ್ಲಿ ಸಹ ಆಡಿರುವ ಗಂಭೀರ್ ಹೇಳಿದ್ದಾರೆ. 
 
ಚೆಂಡಿನ ಬಣ್ಣವಷ್ಟೇ ಬದಲಾಗಿದೆ ಎಂಬುದು ನಮ್ಮ ಗಮನಕ್ಕೆ ಇರಬೇಕು. ಅದನ್ನು ಬಿಟ್ಟು ಏನು ಕೂಡ ಬದಲಾಗಿಲ್ಲ. ಇದು ಕೂಕಬುರಾ ಚೆಂಡಾಗಿದ್ದು ಕೆಂಪು ಮತ್ತು ಬಿಳಿ ಬಾಲ್‌ನಂತಯೇ ವರ್ತಿಸುತ್ತದೆ ಎಂದು ಗಂಭೀರ್ ಹೇಳಿದ್ದಾರೆ. 
 
ಜನರು ಗುಲಾಬಿ ಚೆಂಡಿನ ಬಗ್ಗೆ ಏನೇನೋ ಗುಲ್ಲೆಬ್ಬಿಸಿದ್ದಾರೆ. ಇದು ಹೆಚ್ಚೆಚ್ಚು ಸ್ವಿಂಗ್ ಆಗುತ್ತದೆ, ಡಿಪ್ಸ್ ಆಗುತ್ತದೆ ಎಂದು ವದಂತಿ ಹರಡಿಸುತ್ತಿದ್ದಾರೆ. ನೀವು ಈ ಕುರಿತು ಹೆಚ್ಚೆಚ್ಚು ಯೋಚಿಸಿದಂತೆ ಆಟ ಹೆಚ್ಚು ಜಟಿಲವಾಗುತ್ತದೆ ಎಂದಿದ್ದಾರೆ ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಇಂಡಿಯಾ ಬ್ಲ್ಯೂ ತಂಡವನ್ನು ಮುನ್ನಡೆಸುತ್ತಿರುವ ಗಂಭೀರ್ . 
 
ಕೆಂಪು ಚೆಂಡಿಗೆ ಹೋಲಿಸಿದರೆ ಇದು ಹಗಲು ಹೊತ್ತಿನಲ್ಲಿ ಹೆಚ್ಚು ವಿಸಿಬಲ್ ಆಗಿರುತ್ತದೆ. ಏಕೆಂದರೆ ಇದು ಹೆಚ್ಚು ಬ್ರೈಟ್(ಉಜ್ವಲ) ಆಗಿರುತ್ತದೆ . ಕಳೆದೆರಡು ಆಟಗಳಲ್ಲಿ ನಾನು ಪಿಂಕ್ ಬಾಲ್ ಎದುರಿಸಿಯೇ ಆಟವಾಡಿದ್ದೇನೆ. ಆದರೆ ಅಂತಹ ವ್ಯತ್ಯಾಸವೇನು ಕಂಡು ಬಂದಿಲ್ಲ . ರೆಡ್ ಮತ್ತು ಪಿಕ್ ಬಾಲ್ ವಾಸ್ತವದಲ್ಲಿ ಒಂದೇ ರೀತಿಯಾಗಿ ವರ್ತಿಸುತ್ತವೆ ಎಂದು ಅವರು ಹೇಳಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ