ದಾಖಲೆಯ ದ್ವಿಶತಕ ಸಿಡಿಸಿದ ರೋಹಿತ್ ಹಿಂದಿನ ದಿನ ರಾತ್ರಿ ನರ್ವಸ್ ಆಗಿದ್ದು ಏಕೆ ?

ಬುಧವಾರ, 1 ಜೂನ್ 2016 (20:08 IST)
ನವದೆಹಲಿ: ಭಾರತದ ಕ್ರಿಕೆಟರ್ ರೋಹಿತ್ ಶರ್ಮಾ ಸಮಕಾಲೀನ ಕ್ರಿಕೆಟ್‌ನ ಅತ್ಯಂತ ಶ್ರೇಷ್ಟ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾಗಿದೆ. ಸೀಮಿತ ಓವರುಗಳ ಕ್ರಿಕೆಟ್‌ನಲ್ಲಿ ಭಾರತ ತಂಡದಲ್ಲಿ  ಅಬ್ಬರದ ಕ್ರಿಕೆಟ್ ಆಡುವ ರೋಹಿತ್ ಶರ್ಮಾ ನಿರ್ಣಾಯಕ ಪಾತ್ರಧಾರಿ.
 
 ದೊಡ್ಡ ಇನ್ನಿಂಗ್ಸ್ ಆಡುವುದಕ್ಕೆ ರೋಹಿತ್ ತಂತ್ರಗಾರಿಕೆ ಹೊಂದಿದ್ದಾರೆ. ವಾಸ್ತವವಾಗಿ ಮುಂಬೈಕರ್ ಏಕ ದಿನ ಪಂದ್ಯಗಳ ಇತಿಹಾಸದಲ್ಲಿ ಎರಡು ದ್ವಿಶತಕ ಸಿಡಿಸಿದ ಏಕಮಾತ್ರ ಕ್ರಿಕೆಟರ್ ಎನಿಸಿದ್ದಾರೆ. 
 
ಎಡನ್ ಗಾರ್ಡನ್ಸ್‌ನಲ್ಲಿ ಶ್ರೀಲಂಕಾ ವಿರುದ್ಧ ಅವರ 264 ರನ್ ಏಕದಿನ ಪಂದ್ಯದಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರಾಗಿದೆ. ಇತ್ತೀಚೆಗೆ ಆ ವಿಶೇಷ ಆಟಕ್ಕೆ ಮುಂಚೆ ತಾವು ನಿದ್ರೆರಹಿತ ರಾತ್ರಿಯನ್ನು ಕಳೆದಿದ್ದಾಗಿ ರೋಹಿತ್ ಬಹಿರಂಗ ಮಾಡಿದ್ದಾರೆ. 
 
 ಆಟದ ಹಿಂದಿನ ದಿನ ರಾತ್ರಿ ತಾನು ತುಂಬಾ ನರ್ವಸ್ ಆಗಿದ್ದೆ. ನಾನು ಹೇಗೆ ಬ್ಯಾಟ್ ಮಾಡಬೇಕು. ನನ್ನ ಕಾರ್ಯಯೋಜನೆ ಏನು, ಸ್ಟ್ರೋಕ್ ಪ್ಲೇಯಲ್ಲಿ ಬೆರಳಿನ ಗಾಯದಿಂದ ಸ್ಟ್ರೋಕ್ ಪ್ಲೇಗೆ ಅಡ್ಡಿಯಾಗುತ್ತದಾ ಮುಂತಾದ ಯೋಚನೆಗಳು ಮನಸ್ಸನ್ನು ತುಂಬಿಕೊಂಡಿತ್ತು. ಆದರೆ ಪಂದ್ಯದ ದಿನ ಮಾತ್ರ ನಾನು ಮುಕ್ತ ಮನಸ್ಸಿನಿಂದ ಆಟಕ್ಕಿಳಿದೆ. ಕಳೆದ ಮೂರು ತಿಂಗಳಿಂದ ಗಾಯಗೊಂಡ ವಿಷಯವನ್ನೇ ಮರೆತು ಆಟದಲ್ಲಿ ಮಗ್ನನಾದೆ ಎಂದು ರೋಹಿತ್ ಹೇಳಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.  

ವೆಬ್ದುನಿಯಾವನ್ನು ಓದಿ