ಬೆಂಗಳೂರು: ಕರ್ನಾಟಕ ರಣಜಿ ತಂಡದ ಹಿರಿಯ ಆಟಗಾರ, ಟೀಂ ಇಂಡಿಯಾವನ್ನೂ ಪ್ರತಿನಿಧಿಸಿದ್ದ ರಾಬಿನ್ ಉತ್ತಪ್ಪ ರಾಜ್ಯ ತಂಡವನ್ನು ತೊರೆಯುವ ನಿರ್ಧಾರ ಮಾಡಿದ್ದಾರೆ!
ರಾಜ್ಯ ಕ್ರಿಕೆಟ್ ಸಂಸ್ಥೆಯ ವರ್ತನೆಯಿಂದ ಬೇಸತ್ತ ರಾಬಿನ್ ನೆರೆಯ ಕೇರಳಕ್ಕೆ ವಲಸೆ ಹೋಗಲು ನಿರ್ಧರಿಸಿದ್ದಾರಂತೆ. ಸ್ವತಃ ರಾಬಿನ್ ಉತ್ತಪ್ಪ ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ಪತ್ರ ಬರೆದು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.
ಇದಕ್ಕೆ ಕೆಎಸ್ ಸಿಎ ಕಡೆಯಿಂದಲೂ ನಿರಪೇಕ್ಷಣಾ ಪತ್ರ ಸಿಕ್ಕಿದೆ. ಇದರೊಂದಿಗೆ ರಾಜ್ಯದ ಇನ್ನೊಬ್ಬ ಪ್ರತಿಭಾವಂತ ಕ್ರಿಕೆಟ್ ಬೇರೆ ರಾಜ್ಯಕ್ಕೆ ವಲಸೆ ಹೋದಂತಾಗಿದೆ. ಇದರೊಂದಿಗೆ ಇನ್ನು ರಾಬಿನ್ ಕೇರಳ ಕ್ರಿಕೆಟಿಗನಾಗಿ ಗುರುತಿಸಿಕೊಳ್ಳಲಿದ್ದಾರೆ. ಆ ರಾಜ್ಯದ ಪರ ದೇಶೀಯ ಪಂದ್ಯಗಳನ್ನು ಆಡಲಿದ್ದಾರೆ.
ಟೀಂ ಇಂಡಿಯಾಗೆ ಮರಳುವ ಆಸೆ ಹೊಂದಿದ್ದೇನೆ. ಇಷ್ಟು ದಿನ ರಾಜ್ಯದ ಪರ ಆಡಿದ್ದಕ್ಕೆ ಸಂತೃಪ್ತಿಯಿದೆ ಎಂದಿದ್ದಾರೆ. ಅವರನ್ನು ಉಳಿಸಿಕೊಳ್ಳಲು ಕೆಎಸ್ ಸಿಎ ಪಟ್ಟ ಪ್ರಯತ್ನಗಳೆಲ್ಲಾ ವಿಫಲವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ