ವಿಶ್ವಕಪ್ 2019: ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಇಂದು ಮೂರು ವಿಶ್ವದಾಖಲೆ ಮಾಡುವ ಅವಕಾಶ!

ಶನಿವಾರ, 6 ಜುಲೈ 2019 (09:13 IST)
ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸುತ್ತಿರುವ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾಗೆ ಇಂದಿನ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮೂರು ವಿಶ್ವದಾಖಲೆ ಮಾಡುವ ಅವಕಾಶ ಎದುರಾಗಿದೆ.


ಈಗಾಗಲೇ ವಿಶ್ವಕಪ್ ನಲ್ಲಿ ಒಟ್ಟು 5 ಶತಕಗಳೊಂದಿಗೆ ಗರಿಷ್ಠ ವಿಶ್ವಕಪ್ ಶತಕಧಾರಿಗಳ ಪಟ್ಟಿಯಲ್ಲಿ ಜಾಗತಿಕವಾಗಿ ದ್ವಿತೀಯ ಸ್ಥಾನದಲ್ಲಿರುವ ರೋಹಿತ್ ಇಂದು ಶತಕ ಗಳಿಸಿದರೆ ಸಚಿನ್ ದಾಖಲೆ ಸರಿಗಟ್ಟಲಿದ್ದಾರೆ. ಅಷ್ಟೇ ಅಲ್ಲದೆ, ಒಂದೇ ವಿಶ್ವಕಪ್ ನಲ್ಲಿ ಅತ್ಯಧಿಕ ಶತಕ ಗಳಿಸಿದ ಕುಮಾರ ಸಂಗಕ್ಕಾರ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ಇಂದು ರೋಹಿತ್ 43 ರನ್ ಗಳಿಸಿದರೆ ಒಂದೇ ವಿಶ್ವಕಪ್ ನ ಲೀಗ್ ಹಂತದಲ್ಲಿ ಅತ್ಯಧಿಕ ರನ್ ಗಳಿಸಿದ ಸಚಿನ್ ತೆಂಡುಲ್ಕರ್ ಅವರ ವಿಶ್ವ ದಾಖಲೆ ಮುರಿಯಲಿದ್ದಾರೆ. ಸಚಿನ್ ಲೀಗ್ ಹಂತದಲ್ಲಿ 582 ರನ್ ಗಳಿಸಿ ನಂ.1 ಸ್ಥಾನದಲ್ಲಿದ್ದಾರೆ. ರೋಹಿತ್ ಈ ವಿಶ್ವಕಪ್ ಕೂಟದಲ್ಲಿ ಇದುವರೆಗೆ ಲೀಗ್ ಹಂತದಲ್ಲಿ 544 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಈ ಮೂರು ದಾಖಲೆಗಳನ್ನು ಮುರಿಯಬೇಕಾದರೆ ರೋಹಿತ್ ಇಂದು ಮತ್ತೊಂದು ಶತಕ ಗಳಿಸಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ