ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರಲ್ಲಿ ಅಂತಿಮ ಲೀಗ್ ಪಂದ್ಯವಾಡಲು ಸಿದ್ಧವಾಗಿರುವ ಟೀಂ ಇಂಡಿಯಾ ಇಂದು ಶ್ರೀಲಂಕಾ ತಂಡವನ್ನು ಎದುರಿಸಲಿದೆ.
ಈಗಾಗಲೇ ಸೆಮಿಫೈನಲ್ ಗೆ ಲಗ್ಗೆಯಿಟ್ಟಿರುವ ಟೀಂ ಇಂಡಿಯಾಗೆ ಇದು ಔಪಚಾರಿಕ ಪಂದ್ಯವಷ್ಟೇ. ಹಾಗಿದ್ದರೂ ಅಂಕ ಸುಧಾರಿಸುವ ನಿಟ್ಟಿನಲ್ಲಿ ಈ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಅನಿವಾರ್ಯ.
ಆದರೆ ಅತ್ತ ಶ್ರೀಲಂಕಾ ಈಗಾಗಲೇ ಕೂಟದಿಂದ ನಿರ್ಗಮಿಸಿದರೂ ಕೊನೆಯ ಪಂದ್ಯವನ್ನು ಗೆದ್ದು ವಿದಾಯ ಹೇಳಲು ಕಾತುರವಾಗಿದೆ. ಆದರೆ ಅದಕ್ಕೆ ಭಾರತದ ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ಎದುರಿಸುವ ಕಠಿಣ ಸವಾಲು ಇದೆ.
ಟೀಂ ಇಂಡಿಯಾದಲ್ಲಿ ಇಂದಿನ ಪಂದ್ಯಕ್ಕೆ ಬದಲಾವಣೆ ಸಾಧ್ಯತೆಯಿಲ್ಲ. ಹಾಗಿದ್ದರೂ ಒಂದು ವೇಳೆ ಇದುವರೆಗೆ ಅವಕಾಶ ಸಿಗದ ಆಟಗಾರರಿಗೆ ಕೊಹ್ಲಿ ಅವಕಾಶ ನೀಡಲು ಮನಸ್ಸು ಮಾಡಿದರೆ ರವೀಂದ್ರ ಜಡೇಜಾ, ಮಯಾಂಕ್ ಅಗರ್ವಾಲ್ ಗೆ ಸ್ಥಾನ ಸಿಕ್ಕರೂ ಅಚ್ಚರಿಯಿಲ್ಲ. ಆದರೆ ಕೊಹ್ಲಿ ಈ ಪಂದ್ಯವನ್ನು ಹಗುರವಾಗಿ ತೆಗೆದುಕೊಳ್ಳುವ ಸಾಧ್ಯತೆಯಿಲ್ಲ. ಭಾರತಕ್ಕೆ ಮಧ್ಯಮ ಮತ್ತು ಕೊನೆಯ ಕ್ರಮಾಂಕದಲ್ಲಿ ರನ್ ಸರಾಗವಾಗಿ ಹರಿದುಬರುವುದರತ್ತ ಹೆಚ್ಚು ಗಮನ ಕೊಡಬೇಕಿದೆ. ಹಾಗೂ ಫೀಲ್ಡಿಂಗ್ ಸುಧಾರಿಸಲು ಹೆಚ್ಚು ಒತ್ತು ನೀಡಬೇಕಿದೆ. ಸೆಮಿಫೈನಲ್ ನಲ್ಲಿ ಕಠಿಣ ಎದುರಾಳಿ ಸಿಗುವುದು ಖಚಿತವಾದ್ದರಿಂದ ಈ ಪಂದ್ಯವನ್ನು ರಿಹರ್ಸಲ್ ಗೆ ಸಿಕ್ಕ ವೇದಿಕೆ ಎಂದು ಭಾರತ ಬಳಸಿಕೊಳ್ಳಬೇಕಿದೆ.