ಲಂಕಾ ಬೌಲರ್ ಗಳ ಮೇಲೆ ಅದೇನು ಸಿಟ್ಟಿತ್ತೋ ರೋಹಿತ್ ಶರ್ಮಾಗೆ..!

ಶುಕ್ರವಾರ, 22 ಡಿಸೆಂಬರ್ 2017 (21:11 IST)
ಇಂದೋರ್: ಇಂದೋರ್ ನ ಕ್ರಿಕೆಟ್ ಮೈದಾನ ಗುಡುಗು, ಸಿಡಿಲಿನ ನಂತರ ಶಾಂತವಾಗುವ ಆಕಾಶದಂತೆ ಇದೀಗ ತಣ್ಣಗಾಗಿ ಕುಳಿತಿದೆ. ಅಷ್ಟಕ್ಕೂ ರೋಹಿತ್ ಶರ್ಮಾಗೆ ಲಂಕಾ ಬೌಲರ್ ಗಳ ಮೇಲೆ ಅದೇನು ಮೋಹವೋ..! ಆ ಮಟ್ಟಿಗೆ ಬೆವರಿಳಿಸಿದರು!
 

ದ್ವಿತೀಯ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಲಂಕಾ ಬೌಲರ್ ಗಳು ಯಾಕಾದರೂ ಬೌಲಿಂಗ್ ಆಯ್ದುಕೊಂಡೆವೋ ಎನ್ನುವಂತೆ ಮಾಡಿಬಿಟ್ಟರು ರೋಹಿತ್ ಶರ್ಮಾ. ಅವರ ಸಿಡಿಲಬ್ಬರದ ಬ್ಯಾಟಿಂಗ್ ಗೆ ಮೈದಾನವೇ ದಂಗು ಬಡಿದುಹೋಗಿತ್ತು.

ಕೇವಲ 35 ಎಸೆತಗಳಲ್ಲಿ ಶತಕ ಪೂರೈಸಿ ಅತೀ ವೇಗದ ಶತಕ ಗಳಿಸಿದ ಡೇವಿಡ್ ಮಿಲ್ಲರ್ ಜತೆ ವಿಶ್ವದಾಖಲೆ ಗೌರವ ಹಂಚಿಕೊಂಡರು.  ಒಟ್ಟು 46 ಬಾಲ್ ಗಳಲ್ಲಿ 118 ರನ್ ಸಿಡಿಸಿದ ರೋಹಿತ್ 10 ಸಿಕ್ಸರ್, 12 ಬೌಂಡರಿ ಸಿಡಿಸಿದರು.  ಇನ್ನೊಂದೆಡೆ ತಕ್ಕ ಸಾಥ್ ನೀಡುತ್ತಿದ್ದ ಕೆಎಲ್ ರಾಹುಲ್ 49 ಎಸೆತಗಳಲ್ಲಿ 89 ರನ್ ಗಳಿಸಿ ಔಟಾದರು. ಇವರಿಬ್ಬರೂ ಮೊದಲ ವಿಕೆಟ್ ಗೆ ದಾಖಲೆಯ 165 ರನ್ ಪೇರಿಸಿದರು.

ನಂತರ ಬಂದ ಧೋನಿ 28 ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾರೂ ಹೇಳಿಕೊಳ್ಳುವಂತ ಪ್ರದರ್ಶನ ತೋರಲಿಲ್ಲ. ಒಟ್ಟಾರೆಯಾಗಿ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ ದಾಖಲೆಯ 260 ರನ್ ಗಳಿಸಿ ಬೃಹತ್ ಗುರಿಯನ್ನೇ ನೀಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ