ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಇಂದಿನ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ದಾಖಲೆಯೊಂದನ್ನು ಮಾಡುವ ನಿರೀಕ್ಷೆಯಲ್ಲಿದ್ದಾರೆ.
ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಕ್ರಿಕೆಟಿಗರ ಪಟ್ಟಿಯಲ್ಲಿ ರೋಹಿತ್ ನ್ಯೂಜಿಲೆಂಡ್ ನ ಮಾರ್ಟಿನ್ ಗುಪ್ಟಿಲ್ ರನ್ನು ಹಿಂದಿಕ್ಕುವ ಅವಕಾಶ ಪಡೆದಿದ್ದಾರೆ. ರೋಹಿತ್ ಸದ್ಯಕ್ಕೆ 2800 ರನ್ ಗಳಿಸಿದ್ದರೆ ಮಾರ್ಟಿನ್ ಗುಪ್ಟಿಲ್ 2839 ರನ್ ಗಳಿಸಿ ಅವರಿಗಿಂತ ಕೊಂಚವೇ ಮುಂದಿದ್ದಾರೆ. ರೋಹಿತ್ ಈ ಪಂದ್ಯದಲ್ಲಿ 33 ರನ್ ಗಳಿಸಿದರೆ ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲಿದ್ದಾರೆ. ವಿರಾಟ್ ಕೊಹ್ಲಿ ನಂ.1 ಸ್ಥಾನದಲ್ಲಿದ್ದಾರೆ.
ಕಳೆದ ಪಂದ್ಯದಲ್ಲಿ ರೋಹಿತ್ ಪ್ರದರ್ಶನ ಉತ್ತಮವಾಗಿರಲಿಲ್ಲ. 17 ಎಸೆತ ಎದುರಿಸಿದ ಹಿಟ್ ಮ್ಯಾನ್ 15 ರನ್ ಗಳಿಸಿ ಔಟಾಗಿದ್ದರು. ಆದರೆ ಈ ಪಂದ್ಯದಲ್ಲಿ ಅವರು ರನ್ ಸಿಡಿಸುವ ನಿರೀಕ್ಷೆಯಿದೆ.