ಕೊರೋನಾ ಕೊನೆಗೊಳ್ಳಲಿ, ಐಪಿಎಲ್ ಆಮೇಲೆ ನೋಡ್ಕೊಳ್ಳೋಣ ಎಂದ ರೋಹಿತ್ ಶರ್ಮಾ

ಶುಕ್ರವಾರ, 27 ಮಾರ್ಚ್ 2020 (10:12 IST)
ಮುಂಬೈ: ಕೊರೋನಾವೈರಸ್ ರೋಗದಿಂದಾಗಿ ಐಪಿಎಲ್ ಅನಿಶ್ಚಿತತೆಯಲ್ಲಿದೆ. ಈ ಬಗ್ಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.


ನಿನ್ನೆ ಯಜುವೇಂದ್ರ ಚಾಹಲ್ ಜತೆಗೆ ಇನ್ ಸ್ಟಾಗ್ರಾಂ ಲೈವ್ ನಲ್ಲಿ ಮಾತನಾಡಿರುವ ರೋಹಿತ್ ‘ಎಲ್ಲರೂ ಐಪಿಎಲ್ ಯಾವಾಗ ಆರಂಭವಾಗುತ್ತದೆ ಎಂದು ಕೇಳುತ್ತಿದ್ದಾರೆ. ಒಬ್ಬ ಕ್ರಿಕೆಟಿಗರಾಗಿ ನಾವು ಆಡಲು ಬಯಸುತ್ತೇವೆ. ಆದರೆ ಅದಕ್ಕಿಂತ ಮೊದಲು ದೇಶದ ಪರಿಸ್ಥಿತಿ ನೋಡಬೇಕು.

ಐಪಿಎಲ್ ಯಾವಾಗ ಬೇಕಿದ್ದರೂ ಆಡಬಹುದು. ಆದರೆ ಕೊರೋನಾ ಪೀಡಿತವಾಗಿರುವ ದೇಶ ಮೊದಲು ಸಹಜ ಸ್ಥಿತಿಗೆ ಬರಬೇಕು. ಐಪಿಎಲ್ ಆಮೇಲೆ ನೋಡ್ಕೊಳ್ಳೋಣ. ಇಂತಹ ಪರಿಸ್ಥಿತಿಯ ಮುಂಬೈಯನ್ನು ಜೀವಮಾನದಲ್ಲಿ ಕಂಡಿರಲಿಲ್ಲ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ