ವಿಶ್ವಕಪ್ ಗೆ ತಯಾರಾಗಲು ಸಮಯ ಕೊಡಿ ಎಂದ ರೋಹಿತ್ ಶರ್ಮಾ

ಗುರುವಾರ, 23 ಏಪ್ರಿಲ್ 2020 (09:28 IST)
ಮುಂಬೈ: ಒಂದು ವೇಳೆ ಕೊರೋನಾವೈರಸ್ ಸುಧಾರಿಸಿದರೆ ಅಕ್ಟೋಬರ್ ವೇಳೆಗೆ ಟಿ20 ವಿಶ್ವಕಪ್ ನಡೆಯಲಿದೆ. ಈ ಪ್ರಮುಖ ಕ್ರೀಡಾಕೂಟಕ್ಕೆ ತಯಾರಾಗಲು ಸಾಕಷ್ಟು ಸಮಯ ಕೊಡುತ್ತಾರೆಂಬುದು ನನ್ನ ವಿಶ್ವಾಸ ಎಂದು ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ.


ಸದ್ಯದ ಪರಿಸ್ಥಿತಿಯಲ್ಲಿ ಕ್ರಿಕೆಟಿಗರಿಗೆ ವಿಶ್ರಾಂತಿಯಿದ್ದರೂ ಅಭ್ಯಾಸ ನಡೆಸಲು ಅವಕಾಶ ಸಿಗುತ್ತಿಲ್ಲ. ಈ ಲಾಕ್ ಡೌನ್ ಪರಿಸ್ಥಿತಿ ಮೇ ತಿಂಗಳಿನಲ್ಲೂ ಮುಂದುವರಿಯುವ ನಿರೀಕ್ಷೆಯಿದೆ. ಅದಾದ ಬಳಿಕ ಕ್ರಿಕೆಟ್ ವೇಳಾಪಟ್ಟಿ ಹೇಗಿರುತ್ತದೆ ಎಂದು ಗೊತ್ತಿಲ್ಲ.

ವಿಶ್ವಕಪ್ ಗೆಲ್ಲುವುದು ಎಲ್ಲರ ಕನಸು. ಏಕದಿನ ವಿಶ್ವಕಪ್ ಗೆಲ್ಲಲು ಟೀಂ ಇಂಡಿಯಾಕ್ಕೆ ಸಾಧ‍್ಯವಾಗಿರಲಿಲ್ಲ. ಆಗ ರೋಹಿತ್ ತೀವ್ರ ನಿರಾಶೆಗೊಳಗಾಗಿದ್ದರು. ಅದನ್ನು ಟಿ20 ವಿಶ್ವಕಪ್ ಮೂಲಕವಾದರೂ ಸರಿಪಡಿಸಬೇಕೆಂಬುದು ಅವರ ಆಸೆ. ಅದಕ್ಕಾಗಿ ತಯಾರಾಗಲು ಸಾಕಷ್ಟು ಸಮಯ ಸಿಗಲಿದೆ ಎಂಬ ಭರವಸೆಯಲ್ಲಿ ರೋಹಿತ್ ಇದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ