ರಾಂಚಿ ಟೆಸ್ಟ್ ನಲ್ಲಿ ರೋಹಿತ್ ಶರ್ಮಾ ಮಾಡಿದ ಆ ಮೂರು ದಾಖಲೆಗಳು ಯಾವುವು ಗೊತ್ತಾ?

ಭಾನುವಾರ, 20 ಅಕ್ಟೋಬರ್ 2019 (09:02 IST)
ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಮತ್ತೊಂದು ಶತಕ ಸಿಡಿಸಿ ಈ ಸರಣಿಯಲ್ಲಿ ಸಿಡಿಸಿದ ಶತಕಗ ಸಂಖ್ಯೆಯನ್ನು ಮೂರಕ್ಕೇರಿಸಿದ್ದಾರೆ.


ಅದೆಲ್ಲಾ ಇರಲಿ, ರೋಹಿತ್ ಸಿಡಿಸದರೆ ಹಲವು ದಾಖಲೆಗಳು ಪುಡಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಇನಿಂಗ್ಸ್ ನಲ್ಲಿ ಹಿಟ್ ಮ್ಯಾನ್ ರೋಹಿತ್ ಮೂರು ಪ್ರಮುಖ ದಾಖಲೆಗಳನ್ನು ಮಾಡಿದ್ದಾರೆ.

ಮೊದಲನೆಯದಾಗಿ ಒಂದೇ ಟೂರ್ನಮೆಂಟ್ ನಲ್ಲಿ ಅದೂ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ವಿಂಡೀಸ್ ನ ಹೆಟ್ ಮ್ಯಾರ್ ದಾಖಲೆಯನ್ನು (15) ರೋಹಿತ್ ಪುಡಿಗಟ್ಟಿದ್ದಾರೆ. ರೋಹಿತ್ ಮಾಡಿರುವ ಇನ್ನೊಂದು ದಾಖಲೆಯೆಂದರೆ ಒಂದೇ ಟೆಸ್ಟ್ ಸರಣಿಯಲ್ಲಿ ಆರಂಭಿಕರಾಗಿ ಅತೀ ಹೆಚ್ಚು ಶತಕ ಗಳಿಸಿರುವುದು. ಇದಕ್ಕೂ ಮೊದಲು ಈ ದಾಖಲೆ ಮಾಡಿದ್ದ ಭಾರತೀಯನೆಂದರೆ ಸುನಿಲ್ ಗವಾಸ್ಕರ್. ಈಗ ಆ ದಾಖಲೆ ರೋಹಿತ್ ಪಾಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ