ಭಾರತ-ದ.ಆಫ್ರಿಕಾ ಟೆಸ್ಟ್ ಕ್ರಿಕೆಟ್: ಟಾಸ್ ಗೆದ್ದ ಟೀಂ ಇಂಡಿಯಾ

ಶನಿವಾರ, 19 ಅಕ್ಟೋಬರ್ 2019 (09:14 IST)
ರಾಂಚಿ: ಭಾರತ ಮತ್ತು ದ.ಆಫ್ರಿಕಾ ಟೆಸ್ಟ್ ಕ್ರಿಕೆಟ್ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.


ಈ ಮೂಲಕ ಈ ಸರಣಿಯ ಎಲ್ಲಾ ಪಂದ್ಯಗಳಲ್ಲೂ ಟಾಸ್ ಸೋತು ದ.ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್ ತಮ್ಮ ದುರಾದೃಷ್ಟವನ್ನು ತಾವೇ ಹಳಿದುಕೊಳ್ಳುವಂತಾಯಿತು.

ಟೀಂ ಇಂಡಿಯಾ ಈ ಪಂದ್ಯದಲ್ಲಿ ಅನುಭವಿ ಇಶಾಂತ್ ಶರ್ಮಾರನ್ನು ಹೊರಗಿಟ್ಟು ಯುವ ವೇಗಿ ಶಹಬಾಝ್ ನದೀಮ್ ಗೆ ಅವಕಾಶ ನೀಡಿದೆ. ಇದು ಅವರ ಚೊಚ್ಚಲ  ಅಂತಾರಾಷ್ಟ್ರೀಯ ಪಂದ್ಯವೆಂಬುದು ವಿಶೇಷ. ಇನ್ನು, ಸ್ಪಿನ್ನರ್ ಕುಲದೀಪ್ ಯಾದವ್ ತಂಡದೊಳಕ್ಕೆ ಪ್ರವೇಶಿಸಬಹುದು ಎಂಬ ಸುದ್ದಿಗಳಿತ್ತಾದರೂ, ಅವರಿನ್ನೂ ಚೇತರಿಸಿಕೊಳ್ಳದ ಕಾರಣ ಅವಕಾಶ ನೀಡಲಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ