ಜತೆಯಾಟವಾಡಲು ಕಾಯುತ್ತಿದ್ದೇನೆ! ಕೊಹ್ಲಿಗೆ ರೋಹಿತ್ ಶರ್ಮಾ ಪ್ರತಿಕ್ರಿಯೆ

ಶನಿವಾರ, 2 ಮೇ 2020 (10:02 IST)
ಮುಂಬೈ: ರೋಹಿತ್ ಶರ್ಮಾ ಹುಟ್ಟುಹಬ್ಬಕ್ಕೆ ವಿರಾಟ್ ಕೊಹ್ಲಿ ಶುಭ ಹಾರೈಸಿದ್ದರು. ಆ ಶುಭ ಹಾರೈಕೆಗೆ ಈಗ ರೋಹಿತ್ ಪ್ರತಿಕ್ರಿಯೆ ನೀಡಿದ್ದಾರೆ.


ರೋಹಿತ್ ಶರ್ಮಾ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದ ಕೊಹ್ಲಿ ಮತ್ತಷ್ಟು ಅದ್ಭುತ ಬ್ಯಾಟಿಂಗ್ ನೋಡಲು ಕಾಯುತ್ತಿರುವುದಾಗಿ ಶುಭ ಹಾರೈಸಿದ್ದರು. ಅದಕ್ಕೆ ರೋಹಿತ್ ಅದೇ ದಾಟಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ನಿಮ್ಮ ಜತೆ ಜೊತೆಯಾಟವಾಡಲು ಕಾಯುತ್ತಿರುವುದಾಗಿ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ಇಬ್ಬರ ನಡುವೆ ಎಷ್ಟೇ ವೈಮನಸ್ಯವಿದೆ ಎಂಬ ಸುದ್ದಿಯಿದ್ದರೂ ಹುಟ್ಟುಹಬ್ಬದ ದಿನ ಇಬ್ಬರೂ ನಡೆಸಿದ ಸಂಭಾಷಣೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ