ಪತ್ನಿ ಜತೆ ಕ್ರಿಕೆಟಿಗ ರೋಹಿತ್ ಶರ್ಮಾ ಟ್ವಿಟರ್ ನಲ್ಲೇ ರೊಮ್ಯಾನ್ಸ್
ಗುರುವಾರ, 15 ಡಿಸೆಂಬರ್ 2016 (12:32 IST)
ಮುಂಬೈ: ಸದ್ಯಕ್ಕೆ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕ್ರಿಕೆಟಿಗ ರೋಹಿತ್ ಶರ್ಮಾ ಬಿಡುವಿನ ಮೂಡ್ ನಲ್ಲಿದ್ದಾರೆ. ಮೊನ್ನೆಯಷ್ಟೇ ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ರೋಹಿತ್ ಪತ್ನಿಗೆ ಟ್ವಿಟರ್ ನಲ್ಲೇ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ.
ಮೊನ್ನೆ ಮೊನ್ನೆ ನಡೆದ ಹಾಗಿದೆ ಎಲ್ಲವೂ. ಒಂದು ವರ್ಷ ಆಯಿತು ಎಂದು ಅನಿಸುವುದೇ ಇಲ್ಲ ಎಂದು ರೋಹಿತ್ ಹೇಳಿಕೊಂಡಿದ್ದಾರೆ. ಅತ್ತ ಅವರ ಪತ್ನಿ ರಿತಿಕಾ ಕೂಡಾ ಪತಿ ಜತೆಗಿನ ರೊಮ್ಯಾಂಟಿಕ್ ಫೋಟೋವನ್ನು ಪ್ರಕಟಿಸಿದ್ದಾರೆ.
ಇದನ್ನು ನೋಡಿ ಇನ್ನೂ ಖುಷಿಗೊಂಡಿರುವ ರೋಹಿತ್, ಮತ್ತೊಂದು ಕುತೂಹಲಕಾರಿ ಸಂಗತಿಯನ್ನು ಹೊರಹಾಕಿದ್ದಾರೆ. ನನ್ನ ಹುಡುಗಿ ಮದುವೆ ದಿನ ನೀಲಿ ಬಣ್ಣದ ಉಡುಗೆ ತೊಟ್ಟಿದ್ದಳು. ಅವಳೇ ಎಲ್ಲವನ್ನೂ ಏರ್ಪಾಡು ಮಾಡಿದ್ದಳು. ತನ್ನ ಮುದ್ದಿನ ನಾಯಿಯ ಹೆಸರನ್ನೂ ಆಮಂತ್ರಣ ಪತ್ರಿಕೆಯಲ್ಲಿ ಹಾಕಿಕೊಂಡಿದ್ದಳು ಎಂದು ರೋಹಿತ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ