ಅಭಿಮಾನಿಯ ಮೊಬೈಲ್ ಕಿತ್ತು ದರ್ವರ್ತನೆ ತೋರಿದ ಆರ್ ಪಿ ಸಿಂಗ್
ಅದು ಬೇರಾರೂ ಅಲ್ಲ. ಟೀಂ ಇಂಡಿಯಾದ ಆಟಗಾರನಾಗಿದ್ದ ಗುಜರಾತ್ ತಂಡದ ಪ್ರಮುಖ ವೇಗಿ ಆರ್ ಪಿ ಸಿಂಗ್. ಬೌಂಡರಿ ಗೆರೆ ಬಳಿ ನಿಂತಿದ್ದ ಅವರು ಅಭಿಮಾನಿಯೊಬ್ಬನ ಕೈಯಿಂದ ಮೊಬೈಲ್ ಕಿತ್ತುಕೊಂಡು ಮೈದಾನತ್ತ ಕುಕ್ಕಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇಡೀ ತಂಡದ ಬಗ್ಗೆ ಹಾಗೂ ಆರ್ ಪಿ ಸಿಂಗ್ ಬೌಲಿಂಗ್ ಬಗ್ಗೆ ಒಂದೆಡೆ ಪ್ರಶಂಸೆ ವ್ಯಕ್ತವಾಗುತ್ತಿದ್ದರೆ, ಇನ್ನೊಂದೆಡೆ ಅವರ ಈ ರೀತಿಯ ವರ್ತನೆ ಬಗ್ಗೆ ಚರ್ಚೆಗಳಾಗುತ್ತಿವೆ. ಆದರೆ ಯಾಕಾಗಿ ಅವರು ಈ ರೀತಿ ಮಾಡಿದ್ದಾರೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ.