ಚಂಡಮಾರುತದಲ್ಲಿ ಸಿಲುಕಿದ ಸಚಿನ್ ಕುಟುಂಬ ಪ್ರಯಾಣಿಸುತ್ತಿದ್ದ ಖಾಸಗಿ ಜೆಟ್: ಅಪಾಯದಿಂದ ಜಸ್ಟ್‌ಮಿಸ್‌

Sampriya

ಶನಿವಾರ, 13 ಸೆಪ್ಟಂಬರ್ 2025 (15:37 IST)
Photo Credit X
ಮುಂಬೈ:  ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್‌ ಹಾಗೂ ಅವರ ಕುಟುಂಬ ಈಚೆಗೆ ಆಫ್ರಿಕಾದ ಮಸಾಯಿ ಮಾರಾಕ್ಕೆ ಖಾಸಗಿ ಜೆಟ್​ನಲ್ಲಿ ತೆರಳಿತ್ತು. ಆ ಸಂದರ್ಭದಲ್ಲಿ ನಡೆದ ಘಟನೆಯ ವಿಡಿಯೋವನ್ನು ಇದೀಗ ಸಚಿನ್ ಬಿಡುಗಡೆ ಮಾಡಿದ್ದಾರೆ.

ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೆಲವೇ ದಿನಗಳ ಹಿಂದೆ ಆಫ್ರಿಕಾ ಪ್ರವಾಸ ಮಾಡಿದ್ದರು. ಇದೀಗ ಆ ಪ್ರವಾಸದಲ್ಲಿ ನಡೆದ ರೋಮಾಂಚನಕಾರಿ ಘಟನೆಯ ವಿಡಿಯೋವೊಂದನ್ನು ಸಚಿನ್‌ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  

ನಾವು ವಿಮಾನದೊಳಗೆ ಇದ್ದೆವು ಮತ್ತು ಚಂಡಮಾರುತವು ಸಮೀಪಿಸುತ್ತಿರುವುದನ್ನು ನೀವು ನೋಡಬಹುದು. ಮೂಲತಃ, ನಮ್ಮ ಜೆಟ್ ಆ ಚಂಡಮಾರುತವು ಈಗ ಇರುವ ಸ್ಥಳದಲ್ಲಿಯೇ ಇಳಿಯಬೇಕಿತ್ತು. ನಮ್ಮ ಜೆಟ್ ಲ್ಯಾಂಡಿಂಗ್ ಮಾಡುವ ಸ್ಥಳದಿಂದ ಕೇವಲ ಎರಡು ಮೈಲುಗಳಷ್ಟು ದೂರದಲ್ಲಿತ್ತು. ಆದರೆ ಕೆಟ್ಟ ಹವಾಮಾನದಿಂದಾಗಿ ಅಲ್ಲಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗಲಿಲ್ಲ. ಬಿರುಗಾಳಿಯಿಂದಾಗಿ ಜೆಟ್ ಅನ್ನು ಮತ್ತೊಂದು ಲ್ಯಾಂಡಿಂಗ್ ಸ್ಥಳಕ್ಕೆ ತಿರುಗಿಸಬೇಕಾಯಿತು. ಆದರೆ ತೊಂದರೆಗಳು ಅಲ್ಲಿಗೆ ಮುಗಿಯಲಿಲ್ಲ ಎಂದು ಸಚಿನ್‌ ವಿವರಿಸಿದ್ದಾರೆ. 

ಯಾವ ಪರ್ಯಾಯ ಸ್ಥಳದಲ್ಲಿ ಜೆಟ್ ಅನ್ನು ಇಳಿಸಲು ಪ್ರಯತ್ನಿಸಿದೆವೋ ಆ ರನ್​ ವೇ ತುಂಬ ಕಾಡು ಪ್ರಾಣಿಗಳ ಹಿಂಡಿತ್ತು. ಆದ್ದರಿಂದ, ನಾವು ಅವುಗಳನ್ನು ಅಲ್ಲಿಂದ ಚದುರಿಸಲು ನಮ್ಮ ಜೆಟ್​ ಅನ್ನು ಎರಡು ಬಾರಿ ಕೆಳಕ್ಕೆ ಇಳಿಸಿ ನಂತರ ಮತ್ತೆ ಹಾರಿಸಿದೆವು. ಹೀಗಾಗಿ ಪ್ರಾಣಿಗಳು ರನ್​ವೇ ಇಂದ ದೂರಕ್ಕೆ ಹೊದವು. ಅಂತಿಮವಾಗಿ ನಮ್ಮ ಜೆಟ್ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಯಿತು ಎಂದು ಸಚಿನ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ