ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ ನಿಶ್ಚಿತಾರ್ಥ: ಸಚಿನ್ ಸೊಸೆಯಾಗುತ್ತಿರುವ ಸಾನಿಯಾ ಯಾರು

Krishnaveni K

ಗುರುವಾರ, 14 ಆಗಸ್ಟ್ 2025 (10:45 IST)
Photo Credit: X
ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ, ಕ್ರಿಕೆಟಿಗ ಅರ್ಜುನ್ ತೆಂಡುಲ್ಕರ್ ಖ್ಯಾತ ಉದ್ಯಮಿ ರವಿ ಘಾಯ್ ಮೊಮ್ಮಗಳು ಸಾನಿಯಾ ಚಂದೋಕ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
 

ಗ್ರಾವಿಸ್ ಗ್ರೂಪ್ ಉದ್ಯಮ ಸಂಸ್ಥೆಯ ಮಾಲಿಕರು ರವಿ ಘಾಯ್. ಈ ಕುಟುಂಬವೇ ಉದ್ಯಮದ ಕುಟುಂಬವಾಗಿದೆ. ಸಾನಿಯಾ ಕೂಡಾ ತಮ್ಮ ಕುಟುಂಬದ ಉದ್ಯಮದಲ್ಲೇ ತೊಡಗಿಸಿಕೊಂಡಿದ್ದಾರೆ. ಈಕೆ ಮತ್ತು ಅರ್ಜುನ್ ಬಾಲ್ಯದಿಂದ ಸ್ನೇಹಿತರು. ಸಾನಿಯಾ ತಂದೆ ಕೂಡಾ ಸಚಿನ್ ತೆಂಡುಲ್ಕರ್ ಗೆ ಸ್ನೇಹಿತ. ಹೀಗಾಗಿ ಎರಡೂ ಕುಟುಂಬದವರ ನಡುವೆ ಮೊದಲಿನಿಂದಲೂ ನಿಕಟ ಸಂಪರ್ಕವಿದೆ.


ಇದೀಗ ತೀರಾ ಆಪ್ತರು ಸಮ್ಮುಖದಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಆದರೆ ಎರಡೂ ಕುಟುಂಬಸ್ಥರೂ ಇನ್ನೂ ನಿಶ್ಚಿತಾರ್ಥವನ್ನು ಖಚಿತಪಡಿಸಿಲ್ಲ. ಆದರೆ ಫೋಟೋಗಳು ಈಗಾಗಲೇ ವೈರಲ್ ಆಗಿದೆ.

 
25 ವರ್ಷದ ಅರ್ಜುನ್ ತೆಂಡುಲ್ಕರ್ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಾರೆ. ಆದರೆ ಅವರಿಗೆ ಹೆಚ್ಚು ಅವಕಾಶ ಸಿಕ್ಕಿರಲಿಲ್ಲ. ಗೋವಾ ಪರ ದೇಶೀಯ ಕ್ರಿಕೆಟ್ ಆಡುತ್ತಿದ್ದಾರೆ. ಇದೀಗ ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಬಾಲ್ಯದ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ