ರಾಷ್ಟ್ರೀಯ ತಂಡಕ್ಕೆ ಮತ್ತೊಂದು ಹೆಜ್ಜೆ ಇಟ್ಟ ಸಚಿನ್ ಪುತ್ರ

ಸೋಮವಾರ, 11 ಸೆಪ್ಟಂಬರ್ 2017 (09:54 IST)
ಮುಂಬೈ: ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಮುಂಬೈ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಅಪ್ಪನ ಹಾದಿ ಹಿಡಿಯಲು ಮತ್ತೊಂದು ಹೆಜ್ಜೆ ಹಾಕಿದ್ದಾರೆ.

 
ಲಾರ್ಡ್ಸ್ ಮೈದಾನದಲ್ಲಿ ಸತತ ಅಭ್ಯಾಸ ನಡೆಸುತ್ತಿರುವ ಅರ್ಜುನ್ ತೆಂಡುಲ್ಕರ್ ಮಹಿಳಾ ವಿಶ್ವಕಪ್ ಕ್ರಿಕೆಟ್ ಸಂದರ್ಭದಲ್ಲಿ ಭಾರತದ ಮಹಿಳಾ ಆಟಗಾರ್ತಿಯರಿಗೆ ಬೌಲಿಂಗ್ ನಡೆಸಿದ್ದರು. ಇಂಗ್ಲೆಂಡ್ ಆಟಗಾರರಿಗೂ ನೆಟ್ಸ್ ನಲ್ಲಿ ಬೌಲಿಂಗ್ ಮಾಡುತ್ತಿದ್ದರು.

ಅಂಡರ್ 14, ಅಂಡರ್ 16 ತಂಡದಲ್ಲಿ ಆಡಿದ ಅನುಭವ ಹೊಂದಿರುವ ಅರ್ಜುನ್ ಸೆಪ್ಟೆಂಬರ್ 16 ರಿಂದ ನಡೆಯಲಿರುವ ಜೆವೈ ಲೆಲೆ ಅಖಿಲ ಭಾರತ ಅ-19 ಕ್ರಿಕೆಟ್ ಟೂರ್ನಿಯಲ್ಲಿ ಆಡಲಿದ್ದಾರೆ.

ಇದನ್ನೂ ಓದಿ.. ಬಾಹುಬಲಿ ಪ್ರಭಾಸ್ ಹೊಡೆದಾಟಕ್ಕೇ ಇಷ್ಟೊಂದು ಖರ್ಚು?!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ