ಮುಂಬೈ: ಸಚಿನ್ ತೆಂಡುಲ್ಕರ್ ಎಷ್ಟು ಜಂಟಲ್ ಮೆನ್ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಆಟದಲ್ಲಿ ಕೊಂಚವೂ ಅಶಿಸ್ತು ಸಹಿಸುವವರಲ್ಲ ಸಚಿನ್.
ಅಂತಹದ್ದೇ ಒಂದು ಘಟನೆ ಅವರು ನಾಯಕರಾಗಿದ್ದಾಗ ನಡೆದಿತ್ತಂತೆ. 1997 ರಲ್ಲಿ ಸಚಿನ್ ತಂಡದ ನಾಯಕರಾಗಿದ್ದಾಗ ವೆಸ್ಟ್ ಇಂಡೀಸ್ ಸರಣಿಯಲ್ಲಿ ಭಾರತ ಕಳಪೆ ಪ್ರದರ್ಶನ ತೋರುತ್ತಿತ್ತು.
ಆಗ ಯುವ ಆಟಗಾರರಾಗಿದ್ದ ಗಂಗೂಲಿ ಫಾರ್ಮ್ ಕಂಡುಕೊಳ್ಳಲು ಏನು ಮಾಡಬೇಕೆಂದು ಸಚಿನ್ ಬಳಿ ಸಲಹೆ ಕೇಳಿದ್ದರಂತೆ. ಅದಕ್ಕೆ ಸಹಜವಾಗಿಯೇ ಸಚಿನ್ ಬೆಳಿಗ್ಗೆ ಓಡುವಂತೆ ಸಲಹೆ ಮಾಡಿದ್ದರಂತೆ.
ಆದರೆ ಗಂಗೂಲಿ ಈ ಸಲಹೆಯನ್ನು ಕಿವಿ ಮೇಲೆ ಹಾಕಿಕೊಳ್ಳದ್ದಕ್ಕೆ ಸಚಿನ್ ಯದ್ವಾ ತದ್ವಾ ಸಿಟ್ಟಾಗಿದ್ದರಂತೆ. ನಿನ್ನನ್ನು ಮನೆಗೆ ಕಳುಹಿಸುತ್ತೇನೆ ಎಂದು ಹೂಂಕರಿಸಿದ್ದರಂತೆ. ಕೊನೆಗೆ ಹೇಗೋ ಕ್ಷಮೆ ಕೇಳಿ ಗಂಗೂಲಿ ಬಚವಾದರಲ್ಲದೆ, ಮರಳಿ ಫಾರ್ಮ್ ಗೆ ಬಂದಿದ್ದು ಇತಿಹಾಸ. ಇಂತಹದ್ದೊಂದು ಘಟನೆಯನ್ನು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.