ಕೈ ಯಿಲ್ಲದಿದ್ದರೂ ಕ್ರಿಕೆಟ್ ಆಡುವ ಯುವಕನನ್ನ ಭೇಟಿಯಾಡಿದ ಸಚಿನ್ ತೆಂಡುಲ್ಕರ್

geetha

ಶನಿವಾರ, 24 ಫೆಬ್ರವರಿ 2024 (17:42 IST)
ಮುಂಬೈ :ಮೂಲತಃ ಜಮ್ಮು ಕಾಶ್ಮೀರದವರಾದ ಅಮಿರ್‌ ಹುಸೇನ್‌ ರನ್ನು ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿರುವ ಸಚಿನ್‌ ಭೇಟಿಯಾದರು. ಎರಡೂ ಕೈಗಳು ಇಲ್ಲದಿದ್ದರೂ ಸಹ ಭುಜದಲ್ಲಿ ಬ್ಯಾಟ್‌ ಸಿಕ್ಕಿಸಿಕೊಂಡು ಕ್ರಿಕೆಟ್‌ ಆಡುವ ಮೂಲಕ ಖ್ಯಾತನಾಗಿದ್ದ ಅಮಿರ್‌ ಹುಸೇನ್‌ ಲೋನೆ ಎಂಬ ಯುವಕನನ್ನು ಕ್ರಿಕೆಟ್‌ ದೇವರು ಎಂದೇ ಖ್ಯಾತರಾದ ಸಚಿನ್‌ ತೆಂಡುಲ್ಕರ್‌ ಭೇಟಿಯಾಗಿದ್ದಾರೆ. ಆತನನ್ನು ಹುರಿದುಂಬಿಸಿದ ಸಚಿನ್‌ ಸದಾ ನಮಗೆ ಪ್ರೇರೇಪಣೆ ನೀಡುತ್ತಿರಿ ಎಂದು ಹಾರೈಸಿದ್ದಾರೆ. ಪ್ರತಿಯೊಬ್ಬರೂ ಸಚಿನ್‌ ಹೆಸರಿನ ಟಿಶರ್ಟ್‌ ಪಡೆಯುವ ತವಕದಲ್ಲಿದ್ದರೆ, ಸ್ವತಃ ಸಚಿನ್‌ ತೆಂಡುಲ್ಕರ್‌ ಅಮಿರ್‌ ಹೆಸರಿರುವ ಟಿಶರ್ಟ್‌ ಧರಿಸಿ ಆಡಬೇಕೆಂಬುದು ತನ್ನ ಆಸೆಯಾಗಿದೆ ಎಂದು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ