ಪಾಕಿಸ್ತಾನಕ್ಕೆ ಎರಡು ಪಾಯಿಂಟ್ ನೀಡಿ ಗೆಲುವು ಬಿಟ್ಟುಕೊಡೋದು ನನಗಿಷ್ಟವಿಲ್ಲ: ಸಚಿನ್ ತೆಂಡುಲ್ಕರ್ ಹೇಳಿಕೆ

ಶನಿವಾರ, 23 ಫೆಬ್ರವರಿ 2019 (09:05 IST)
ಮುಂಬೈ: ಪಾಕ್ ವಿರುದ್ಧ ವಿಶ್ವಕಪ್ ಕೂಟದಲ್ಲಿ ಕ್ರಿಕೆಟ್ ಪಂದ್ಯವಾಡಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಆಡಬೇಕು ಎಂದು ಅಭಿಪ್ರಾಯ ಹೊರಹಾಕಿದ್ದಾರೆ.


‘ವೈಯಕ್ತಿಕವಾಗಿ ನಾನು ಪಾಕಿಸ್ತಾನಕ್ಕೆ ಭಾರತ ಆಡದೇ ಎರಡು ಅಂಕಗಳನ್ನು ಬಿಟ್ಟುಕೊಟ್ಟು, ಟೂರ್ನಮೆಂಟ್ ನಲ್ಲಿ ಅವರ ಮುನ್ನಡೆ ಸುಲಭ ಮಾಡುವುದು ಇಷ್ಟವಿಲ್ಲ. ವಿಶ್ವಕಪ್ ನಲ್ಲಿ ನಾವು ಯಾವತ್ತೂ ಪಾಕ್ ವಿರುದ್ಧ ಸೋತಿಲ್ಲ. ಈಗ ಮತ್ತೆ ಅವರನ್ನು ಸೋಲಿಸುವ ಸಮಯ ಬಂದಿದೆ. ಆದರೆ ಅಂತಿಮವಾಗಿ ನಮ್ಮ ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳುತ್ತದೋ, ಅದರ ಜತೆಗೆ ನಾವಿದ್ದೇವೆ’ ಎಂದು ತೆಂಡುಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಆದರೆ ಸಚಿನ್ ಹೇಳಿಕೆಗೆ ವ್ಯಾಪಕ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಕೆಲವರು ಸಚಿನ್ ಹೇಳಿದ್ದು ಸರಿಯಾಗಿಯೇ ಇದೆ ಎಂದು ವಾದಿಸಿದರೆ ಇನ್ನು ಕೆಲವರು ಭಾರತ ರತ್ನ ಪಡೆದ ಕ್ರಿಕೆಟಿಗನಾಗಿ ಸಚಿನ್ ಎರಡು ಅಂಕಗಳನ್ನು ಬಿಟ್ಟುಕೊಡಬೇಕಾಗುತ್ತದೆಂದು ಪಾಕ್ ವಿರುದ್ಧ ಆಡಲು ಹೇಳುವುದು ಸರಿಯಲ್ಲ ಎಂದು ವಾದಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ