ಭಾರತ ಪಾಕ್ ವಿರುದ್ಧ ವಿಶ್ವಕಪ್ ಆಡುವ ಕುರಿತು ಕೊನೆಗೂ ನಿರ್ಧಾರಕ್ಕೆ ಬಂದ ಬಿಸಿಸಿಐ!

ಶುಕ್ರವಾರ, 22 ಫೆಬ್ರವರಿ 2019 (16:12 IST)
ಮುಂಬೈ: ಪುಲ್ವಾಮಾ ದಾಳಿ ನಂತರ ಪಾಕಿಸ್ತಾನ ವಿರುದ್ಧ ವಿಶ್ವಕಪ್ ನಲ್ಲಿ ಪಂದ್ಯವಾಡಬೇಕೇ ಬೇಡವೇ ಎಂಬ ಕುರಿತು ಚರ್ಚೆ ನಡೆಸಲು ಸಭೆ ಕರೆದಿದ್ದ ಬಿಸಿಸಿಐ ಆಡಳಿತ ಮಂಡಳಿ ಕೊನೆಗೂ ಒಂದು ತೀರ್ಮಾನಕ್ಕೆ ಬಂದಿದೆ.


ಭಾರತ ಆಡಬೇಕೇ ಬೇಡವೇ ಎಂಬುದು ಇದೀಗ ಕ್ರಿಕೆಟ್ ವಲಯದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ. ಹಲವರು ಪಾಕ್ ವಿರುದ್ಧ ಆಡುವುದು ಬೇಡ ಎನ್ನುತ್ತಿದ್ದರೂ, ನಿರ್ಣಾಯಕ ಘಟ್ಟದಲ್ಲಿ ಪಾಕ್ ವಿರುದ್ಧ ಪಂದ್ಯ ಬಹಿಷ್ಕರಿಸಿದರೆ ಭಾರತಕ್ಕೇ ನಷ್ಟವಾಗಬಹುದು. ಹೀಗಾಗಿ ಬಿಸಿಸಿಐಗೆ ಈ ವಿಚಾರ ತಲೆನೋವಾಗಿ ಪರಿಣಮಿಸಿತ್ತು.

ಇಂದು ಮುಂಬೈನಲ್ಲಿ ಸಭೆ ಸೇರಿದ ಬಿಸಿಸಿಐ ಆಡಳಿತ ಮಂಡಳಿ ವಿಶ್ವಕಪ್ ನಲ್ಲಿ ಆಡಬೇಕೋ ಬೇಡವೋ ಎಂಬ ವಿಚಾರವನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಧೋನಿ, ಕೋಚ್ ರವಿಶಾಸ್ತ್ರಿಯಂತಹ ಘಟಾನುಘಟಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವ ನಿರ್ಧಾರಕ್ಕೆ ಬಂದಿದೆ. ಹೀಗಾಗಿ ಸದ್ಯಕ್ಕೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ