ಈ ಪಂದ್ಯದ ಐದೂ ದಿನವೂ ಸಚಿನ್ ಒಂದೇ ಹಾಡನ್ನು ಕೇಳುತ್ತಿದ್ದರಂತೆ! ಹಾಗಿದ್ದರೆ ಆ ಹಾಡು ಯಾವುದು ಗೊತ್ತಾ? ಬ್ರ್ಯಾನ್ ಆಡಮ್ಸ್ ರ ಸಮ್ಮರ್ ಆಫ್ 69 ಹಾಡನ್ನು ಪದೇ ಪದೇ ಕೇಳುತ್ತಲೇ ಇದ್ದೆ. ಪೆವಿಲಿಯನ್ ನಲ್ಲಿದ್ದಾಗ, ಮೈದಾನಕ್ಕೆ ತೆರಳುವ ದಾರಿಯಲ್ಲಿ, ಟೀ, ಊಟದ ವಿರಾಮಕ್ಕೆ ಬಂದಾಗ, ಹೀಗೇ ಬಿಡದೇ ಐದೂ ದಿನ ಪದೇ ಪದೇ ಆ ಹಾಡನ್ನು ಕೇಳುತ್ತಿದ್ದೆ. ಅದೇ ರೀತಿ 2003 ರ ವಿಶ್ವಕಪ್ ನಲ್ಲಿ ದ.ಆಫ್ರಿಕಾದಲ್ಲಿ ಪದೇ ಪದೇ ಲಕ್ಕಿ ಅಲಿಯವರ ಸುರ್ ಆಲ್ಬಂ ಹಾಡನ್ನು ಪದೇ ಪದೇ ಕೇಳುತ್ತಿದ್ದೆ. ಈ ಹಾಡು ನನಗೆ ಸ್ಪೂರ್ತಿ ಕೊಡುತ್ತಿತ್ತು ಎಂದು ಸಚಿನ್ ಹೇಳಿಕೊಂಡಿದ್ದಾರೆ.