ಧೋನಿಯಷ್ಟೇ ಫೇಮಸ್ ಈಕೆ!

ಗುರುವಾರ, 8 ಸೆಪ್ಟಂಬರ್ 2016 (10:47 IST)
ಆಕೆ ಬಾಲಿವುಡ್ ತಾರೆಯೂ ಅಲ್ಲ. ಒಲಂಪಿಕ್ ವಿಜೇತೆಯೂ ಅಲ್ಲ. ರಾಜಕಾರಣಿಯೂ ಅಲ್ಲ. ಆದರೆ ಸೆಲಬ್ರಿಟಿಯಷ್ಟೇ ಪ್ರಸಿದ್ಧಿ ಹೊಂದಿದ್ದಾಳೆ. ನಿಜ ಹೇಳಬೇಕೆಂದರೆ ಆಕೆ ಮಹೇಂದ್ರ ಸಿಂಗ್ ಧೋನಿ ಅವರಷ್ಟೇ ಸುದ್ದಿಯಲ್ಲಿರುತ್ತಾಳೆ. ಓಹ್, ಹಾಗಾದರೆ ಅವರು ಯಾರೆಂದು ತಲೆ ಕೆರೆದುಕೊಳ್ಳುತ್ತಿದ್ದೀರಾ? 
ಹೌದು, ಆಕೆ ಸಾಕ್ಷಿ ಧೋನಿ. ಪತಿ ಬ್ಯಾಟ್ ಬೀಸುತ್ತ, ದಾಖಲೆಗಳನ್ನು ನಿರ್ಮಿಸುತ್ತ ಸುದ್ದಿಯಲ್ಲಿದ್ದರೆ ಅವರ ಪತ್ನಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮೂಲಕ ಸುದ್ದಿಯಲ್ಲಿರುತ್ತಾರೆ. ಇತರ ಕ್ರಿಕೆಟಿಗರ ಪತ್ನಿಯರಿಗೆ ಹೋಲಿಸಿದರೆ ಯಾರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವುದಿಲ್ಲ. ಇದ್ದರೂ ಅಷ್ಟಕ್ಕಷ್ಟೇ. ಆದರೆ ಸಾಕ್ಷಿ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಸೃಷ್ಟಿಸುತ್ತಲೇ ಇರುತ್ತಾರೆ. ಗ್ಲಾಮರಸ್ ಪೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಗಮನ ಸೆಳೆಯುತ್ತಾರೆ.
 
ತಮ್ಮ ಪುತ್ರಿಯ ತುಂಟಾಟ, ಪತಿಯೊಂದಿಗಿನ ಫೋಟೋ, ಜತೆಗೆ ಗ್ಲಾಮರಸ್ ಫೋಸ್‌ನ ತಮ್ಮ ಫೋಟೋಗಳನ್ನು ಇನ್‌ಸ್ಟ್ರಾಗ್ರಾಮ್‌, ಟ್ವೀಟರ್‌ನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ ಸಾಕ್ಷಿ.

ವೆಬ್ದುನಿಯಾವನ್ನು ಓದಿ