ಅಪ್ಪನನ್ನು ಕರೆತರಬೇಡ ಎಂದು ಈ ಟೀಂ ಇಂಡಿಯಾ ಕ್ರಿಕೆಟಿಗನಿಗೆ ಎಚ್ಚರಿಸಿದ ಕೆಸಿಎ
ಶುಕ್ರವಾರ, 13 ಜನವರಿ 2017 (10:36 IST)
ಕೊಚ್ಚಿ: ಏನೋ ಆಗಿದ್ದು ಆಗಿ ಹೋಯಿತು. ಆದರೆ ವಾಚಾಳಿ ನಿಮ್ಮ ಅಪ್ಪನನ್ನು ಮಾತ್ರ ಇನ್ನು ಮುಂದೆ ನಿನ್ನ ವೃತ್ತಿ ಜೀವನದ ಹತ್ತಿರಕ್ಕೂ ಬಿಟ್ಟುಕೊಳ್ಳಬಾರದು ಎಂದು ಕೇರಳ ಕ್ರಿಕೆಟಿಗ ಸಂಜು ಸಾಮ್ಸನ್ ಗೆ ಕೇರಳ ಕ್ರಿಕೆಟ್ ಸಂಸ್ಥೆ ಎಚ್ಚರಿಕೆ ನೀಡಿದೆ.
ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸಂಜು ರಣಜಿ ಟ್ರೋಫಿ ಪಂದ್ಯದ ಸಮಯದಲ್ಲಿ ಅಶಿಸ್ತು ತೋರಿದ್ದಕ್ಕಾಗಿ ವಿಚಾರಣೆಗೊಳಗಾಗಿದ್ದರು. ನಂತರ ಕ್ಷಮೆ ಕೇಳಿದ ಕಾರಣಕ್ಕೆ ಅವರನ್ನು ಕ್ಷಮಿಸಿ, ಮೊನ್ನೆ ನಡೆದ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಡುವ ಅವಕಾಶ ನೀಡಲಾಗಿತ್ತು.
ಆದರೆ ಇಷ್ಟೆಲ್ಲಾ ಅವಾಂತರಕ್ಕೆ ಅವರ ತಂದೆ ಸಾಮ್ಸನ್ ಕುಮ್ಮಕ್ಕು ಕಾರಣ ಎನ್ನಲಾಗಿತ್ತು. ಸಾಲದ್ದಕ್ಕೆ ತಂದೆ ಸಾಮ್ಸನ್ ಕೇರಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿದ್ದ ಟಿ.ಕೆ. ಮ್ಯಾಥ್ಯೂಗೆ ಕರೆ ಮಾಡಿ ವಾಚಮಗೋಚರವಾಗಿ ಜರೆದಿದ್ದರು ಎಂದು ದೂರಿನಲ್ಲಿ ಹೇಳಲಾಗಿತ್ತು. ಹೀಗಾಗಿ ಮಗನಿಗೆ ಕ್ಷಮೆ ನೀಡಿದ ಕೆಸಿಎ ಅಪ್ಪನನ್ನು ದೂರವಿಡುವಂತೆ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ