ವಿವಾದ ಸೃಷ್ಟಿಸಿದ ರವಿಚಂದ್ರನ್ ಅಶ್ವಿನ್ ವಿರುದ್ಧ ಶೇನ್ ವಾರ್ನ್ ಕಿಡಿ
ಟ್ವಿಟರ್ ನಲ್ಲಿ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ವಾರ್ನ್ ‘ಒಬ್ಬ ನಾಯಕನಾಗಿ ಮತ್ತು ವೈಯಕ್ತಿಕವಾಗಿ ಅಶ್ವಿನ್ ನಡೆ ಬೇಸರವುಂಟುಮಾಡಿದೆ. ಎಲ್ಲಾ ನಾಯಕರು ಐಪಿಎಲ್ ವಾಲ್ ನಲ್ಲಿ ಸಹಿ ಹಾಕಿ ಕ್ರೀಡಾ ಸ್ಪೂರ್ತಿ ಕಳೆದುಕೊಳ್ಳದೇ ಆಡುವುದಾಗಿ ಭರವಸೆ ನೀಡುತ್ತಾರೆ. ರವಿಚಂದ್ರನ್ ಅಶ್ವಿನ್ ಗೆ ಬಾಲ್ ಹಾಕುವ ಉದ್ದೇಶವೇ ಇರಲಿಲ್ಲ, ಹಾಗಾಗಿ ಅದನ್ನು ಡೆಡ್ ಬಾಲ್ ಎಂದು ಪರಿಗಣಿಸಬೇಕು. ಈ ವಿವಾದದ ಬಗ್ಗೆ ಬಿಸಿಸಿಐ ಗಮನಹರಿಸಬೇಕು’ ಎಂದು ವಾರ್ನ್ ಆಗ್ರಹಿಸಿದ್ದಾರೆ.