ಐಪಿಎಲ್ ನಲ್ಲಿ ಹೊಸ ವಿವಾದ ಸೃಷ್ಟಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಆರ್ ಅಶ್ವಿನ್

ಮಂಗಳವಾರ, 26 ಮಾರ್ಚ್ 2019 (15:42 IST)
ಜೈಪುರ: ಮೊನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರನನ್ನು ವಿವಾದಾತ್ಮಕವಾಗಿ ಔಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ರವಿಚಂದ್ರನ್ ಅಶ್ವಿನ್ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.


185 ರನ್ ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ಪರ ಜೋಸ್ ಬಟ್ಲರ್ ಅದ್ಭುತವಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದರು. ಬಹುಶಃ ಅವರು ಕೊನೆಯವರೆಗೂ ಉಳಿದುಕೊಳ್ಳುತ್ತಿದ್ದರೆ ರಾಜಸ್ಥಾನ್‍ ತಂಡವೇ ಈ ಪಂದ್ಯ ಗೆಲ್ಲುತ್ತಿತ್ತು.

ಆದರೆ 69 ರನ್ ಗಳಿಸಿದ್ದಾಗ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಬಟ್ಲರ್ ರನ್ನು ಅಶ್ವಿನ್ ಔಟ್ ಮಾಡಿದ ರೀತಿ ವಿವಾದಕ್ಕೆ ಕಾರಣವಾಗಿದೆ. ಕ್ರೀಸ್ ಬಿಟ್ಟಿದ್ದ ಬಟ್ಲರ್ ರನ್ನು ಬೌಲಿಂಗ್ ಸಜ್ಜಾಗಿದ್ದ ಅಶ್ವಿನ್ ವಿಕೆಟ್ ಗೆ ಬಾಲ್ ತಾಗಿಸಿ ರನೌಟ್ ಮಾಡಿದ್ದರು. ಇದು ಕ್ರಿಕೆಟ್ ನಲ್ಲಿ ತಪ್ಪೇನೂ ಅಲ್ಲ. ಹಾಗಿದ್ದರೂ ಈ ರೀತಿಯಾಗಿ ಔಟ್ ಮಾಡಿದ್ದು ಸರಿಯಲ್ಲ ಎನ್ನುವುದು ರಾಜಸ್ಥಾನ್ ಸಮರ್ಥಕರ ವಾದ.

ಈ ಔಟ್ ಇದೀಗ ಟ್ವಿಟರ್ ಸೇರಿದಂತೆ, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರವಿಚಂದ್ರನ್ ಅಶ್ವಿನ್ ನಾವು ಮಾಡಿದ್ದು ತಪ್ಪಲ್ಲ, ಕ್ರಿಕೆಟ್ ನಲ್ಲಿ ಇಂತಹದ್ದೆಲ್ಲಾ ಸರ್ವೇ ಸಾಮಾನ್ಯ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ