ಐಪಿಎಲ್: ಕೆಕೆಆರ್ ಮೊದಲ ಪಂದ್ಯ ಗೆದ್ದ ಖುಷಿಯಲ್ಲಿ ಶಾರುಖ್ ಖಾನ್ ಮಾಡಿದ್ದೇನು ಗೊತ್ತಾ?!

ಮಂಗಳವಾರ, 26 ಮಾರ್ಚ್ 2019 (09:06 IST)
ಕೋಲ್ಕೊತ್ತಾ: ಐಪಿಎಲ್ ನ ಈ ಆವೃತ್ತಿಯ ಮೊದಲ ಪಂದ್ಯವನ್ನೇ ಗೆದ್ದ ಖುಷಿಯಲ್ಲಿ ತಂಡದ ಮಾಲಿಕ ಬಾಲಿವುಡ್ ನಟ ಶಾರುಖ್ ಖಾನ್ ಮಾಡಿದ್ದೇನು ಗೊತ್ತಾ?


ಶಾರುಖ್ ಪಂದ್ಯ ಗೆದ್ದ ಖುಷಿಯನ್ನು ವಿಶೇಷವಾಗಿ ಆಚರಿಸಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಂದ್ಯ ಗೆದ್ದ ಖುಷಿಯನ್ನು ಶಾರುಖ್ ವಿಕಲ ಚೇತನ ಅಭಿಮಾನಿಯೊಂದಿಗೆ ಆಚರಿಸಿಕೊಂಡಿದ್ದಾರೆ. ಹರ್ಷಲ್ ಗೊಯೆಂಕಾ ಎಂಬ ಕೆಕೆಆರ್ ತಂಡದ ಅಪ್ಪಟ ಅಭಿಮಾನಿ ಜತೆಗೆ ಶಾರುಖ್ ಗೆಲುವಿನ ಸಂಭ್ರಮ ಆಚರಿಸಿದ್ದಾರೆ. ಹರ್ಷಲ್ ಕೆಕೆಆರ್ ಆಡುವ ಪ್ರತೀ ಪಂದ್ಯವನ್ನೂ ತಪ್ಪದೇ ವೀಕ್ಷಿಸುತ್ತಾರೆ. ಒಂದು ರೀತಿಯಲ್ಲಿ ಕೆಕೆಆರ್ ತಂಡದ ಅಧಿಕೃತ ಅಭಿಮಾನಿ ಈತ. ಹೀಗಾಗಿ ತಂಡದ ವಿಧೇಯ ಅಭಿಮಾನಿಯೊಂದಿಗೇ ತಮ್ಮ ಖುಷಿ ಆಚರಿಸಿಕೊಳ್ಳಲು ಶಾರುಖ್ ನಿರ್ಧರಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ