ನ್ಯೂಜಿಲೆಂಡ್ ಸರಣಿಯಿಂದ ಶಿಖರ್ ಧವನ್ ಔಟ್

ಮಂಗಳವಾರ, 21 ಜನವರಿ 2020 (16:13 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಹೊರಬಿದ್ದಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು ತಂಡದಿಂದ ಹೊರಹೋಗಬೇಕಾಗಿದೆ.


ಶುಕ್ರವಾರದಿಂದ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆರಂಭವಾಗಲಿದೆ. ಆಸ್ಟ್ರೇಲಿಯಾ ವಿರುದ್ಧ ತೃತೀಯ ಏಕದಿನ ಪಂದ್ಯದ ವೇಳೆ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದ ಧವನ್ ಗಾಯ ಗಂಭೀರವಾಗಿದ್ದರಿಂದ ನಂತರ ಬ್ಯಾಟಿಂಗ್ ಮಾಡಿರಲಿಲ್ಲ.

ಹೀಗಾಗಿ ಅವರು ಕೀವೀಸ್ ಸರಣಿಗೆ ತೆರಳುವುದು ಅನುಮಾನವಿತ್ತು. ಇದೀಗ ಗಾಯದ ಗಂಭೀರತೆ ಬಗ್ಗೆ ವೈದ್ಯಕೀಯ ವರದಿ ಬಂದಿದ್ದು ಅವರಿಗೆ ವಿಶ್ರಾಂತಿ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ